ಆನೇಕಲ್:ಕೇಂದ್ರ ಬಿಜೆಪಿ ಸರ್ಕಾರ ಕಾಶ್ಮೀರದ ವಿಶೇಷ ಅಧಿಕಾರವನ್ನು ರದ್ದುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಆರ್ಟಿಕಲ್ 370 ರದ್ದು ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರಿಗೆ ವಿಚಾರ ಸಂಕಿರಣವನ್ನು ನಗರದಲ್ಲಿ ಏರ್ಪಡಿಸಲಾಗಿತ್ತು.
ಒಂದೇ ದೇಶ, ಒಂದೇ ಸಂವಿಧಾನಕ್ಕಾಗಿ 370 ರದ್ದು: ಬಿಜೆಪಿಯಿಂದ ವಿಚಾರ ಸಂಕಿರಣ - ಆನೇಕಲ್ ಹಳೆ ಚಂದಾಪುರದ ಖಾಸಗಿ ಹೋಟೆಲ್
ಕೇಂದ್ರ ಬಿಜೆಪಿ ಸರ್ಕಾರ ಕಾಶ್ಮೀರದ ವಿಶೇಷ ಅಧಿಕಾರವನ್ನು ರದ್ದುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಆರ್ಟಿಕಲ್ 370 ರದ್ದು ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರಿಗೆ ವಿಚಾರ ಸಂಕಿರಣವನ್ನು ನಗರದಲ್ಲಿ ಏರ್ಪಡಿಸಲಾಗಿತ್ತು.
ಒಂದೇ ದೇಶ ಒಂದೇ ಸಂವಿದಾನಕ್ಕಾಗಿ 370 ರದ್ದು: ಬಿಜೆಪಿಯಿಂದ ವಿಚಾರ ಸಂಕೀರ್ಣ
ಆನೇಕಲ್ ಹಳೆ ಚಂದಾಪುರದ ಖಾಸಗಿ ಹೋಟೆಲ್ನಲ್ಲಿ ವಿಚಾರ ಮಂಡಿಸಿ ಗ್ರಾಮೀಣ ಭಾಗದ ಜನರಿಗೆ ಆರ್ಟಿಕಲ್ 370 ರದ್ದು ಮಾಡಿರುವುದನ್ನು ಸಮರ್ಥಿಸುವಂತೆ ಮನವಿ ಮಾಡಲಾಯಿತು.
ವಿಚಾರ ಮಂಡನೆಯಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ತಾಲೂಕು ಅಧ್ಯಕ್ಷ ಶಿವಪ್ಪ ಮುಂತಾದವರು ಭಾಗವಹಿಸಿ ಸಂವಾದ ನಡೆಸಿದರಾದರೂ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿಯನ್ನು ಕಡೆಗಣಿಸಿ ಕರೆಯದೇ ಇದ್ದದ್ದು ತಾಲೂಕಿನ ಬಿಜೆಪಿಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾದಂತಿತ್ತು.