ಬೆಂಗಳೂರು: ನಗರದ ವರ್ತೂರು ಹೋಬಳಿ ವ್ಯಾಪ್ತಿಯ ತುಬರಹಳ್ಳಿ ಗ್ರಾಮದ ಕುಂದಲಹಳ್ಳಿ ಗೇಟ್ ಹಿಂಭಾಗದ ಜಮೀನಿನಲ್ಲಿ ತಾತ್ಕಾಲಿಕ ಗುಡಿಸಲುಗಳಲ್ಲಿ ವಾಸ ಮಾಡುತ್ತಿರುವ ಪಶ್ಚಿಮ ಬಂಗಾಳ, ಅಸ್ಸಾಂ, ಪಂಜಾಬ್ ಹಾಗೂ ಹರಿಯಾಣದ ಸುಮಾರು 260 ಕುಟುಂಬಗಳನ್ನು ತೆರವುಗೊಳಿಸುವ ಸಂಬಂಧ ಫೆ.19 ರಂದು ಬಿಬಿಎಂಪಿ ಜಾರಿಗೊಳಿಸಿದ ನೋಟಿಸ್‌ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಈ ಕುರಿತು ಜಮೀನು ಮಾಲೀಕರಾದ ಎಂ.ನಾರಾಯಣರೆಡ್ಡಿ, ಬಿ. ಮುನಿಯಪ್ಪ ಹಾಗೂ ತಾತ್ಕಾಲಿಕ ಜೋಪಡಿಗಳಲ್ಲಿ ವಾಸ ಮಾಡುತ್ತಿರುವ ಪಶ್ಚಿಮ ಬಂಗಾಳ ಮೂಲದ ಲೈತು ಹಾಗೂ ಮಾಸೂದ ಬೀಬಿ ಸೇರಿದಂತೆ 83 ಜನ ಸಲ್ಲಿಸಿದ ಅರ್ಜಿ ವಿಚಾರಣೆಯು ನ್ಯಾ. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಈ ವೇಳೆ ಬಿಬಿಎಂಪಿ ನೋಟಿಸ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿ, ಅರ್ಜಿ ಸಂಬಂಧ ಬಿಬಿಎಂಪಿಗೆ ತುರ್ತು ನೋಟಿಸ್ ಜಾರಿ ಮಾಡಿತು.