ದೊಡ್ಡಬಳ್ಳಾಪುರ :ಮಧ್ಯರಾತ್ರಿ ಪೆಟ್ರೋಲ್ ಬಂಕ್ಗೆ ನುಗ್ಗಿದ್ದ ಮುಸುಕುಧಾರಿಗಳ ಗ್ಯಾಂಗ್ ಲಾಂಗ್ ತೋರಿಸಿ ಕ್ಯಾಷಿಯರ್‌ನ ಹೆದರಿಸಿ ಇಪ್ಪತ್ತು ಸಾವಿರ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ನಗರದ ಹೊರವಲಯ ರೈಲ್ವೆ ಸ್ಟೇಷನ್ ಬಳಿಯ ರಿಲಯನ್ಸ್ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ.
ಡಿ.19ರ ಮಧ್ಯರಾತ್ರಿಯಲ್ಲಿ ನೈಟ್ಗಸ್ತಿನಲ್ಲಿದ್ದ ಬೀಟ್ ಪೊಲೀಸರು ಪೆಟ್ರೋಲ್ ಬಂಕ್ಗೆ ಭೇಟಿ ನೀಡಿ ತೆರಳಿದ್ದಾರೆ. ಪೊಲೀಸರು ಹಿಂದಿರುಗಿದ ತಕ್ಷಣವೇ ರಾತ್ರಿ 1:56ಕ್ಕೆ ಎರಡು ಬೈಕ್ಗಳಲ್ಲಿ ಹೆಲ್ಮೆಟ್ ಮತ್ತು ಮಂಕಿ ಕ್ಯಾಪ್ ಧರಿಸಿ ಬಂದ ಆರು ಜನರ ತಂಡ ಪೆಟ್ರೋಲ್ ಬಂಕ್ಗೆ ನುಗ್ಗಿದೆ.