ದೊಡ್ಡಬಳ್ಳಾಪುರ: ಬಮೂಲ್ ವ್ಯಾಪ್ತಿಯ ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರದಲ್ಲಿ 2 ರೂಪಾಯಿ ಏರಿಕೆ ಮಾಡುವ ಮೂಲಕ ಬಮೂಲ್ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಿದ್ದು, ಫೆಬ್ರುವರಿ 1ರಿಂದ ನೂತನ ಬೆಲೆ ಜಾರಿಗೆ ಬರಲಿದೆ.
ಕೊರೊನಾ ಸಮಯದಲ್ಲಿ ಹಾಲಿನ ಉತ್ಪನ್ನ ಮಾರಾಟವಾಗದೆ ಸಂಗ್ರಹವಾಗಿತ್ತು. ಇದರಿಂದ ಬಮೂಲ್ ಸಂಸ್ಥೆ ನಷ್ಟ ಸಹ ಅನುಭವಿಸಿತ್ತು. ಸಂಸ್ಥೆ ಮತ್ತು ಹಾಲು ಉತ್ಪಾದಕರನ್ನು ಕಾಪಾಡುವ ಸಲುವಾಗಿ ರೈತರಿಂದ ಖರೀದಿಸುವ ಹಾಲಿಗೆ 4 ರೂಪಾಯಿ ಕಡಿತ ಮಾಡಲಾಗಿತ್ತು. ಸದ್ಯ ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಚೇತರಿಕೆ ಕಂಡಿದೆ. ಬಮೂಲ್ ಸಂಸ್ಥೆಗೆ ಬಂದ ಲಾಭವನ್ನು ರೈತರಿಗೆ ನೀಡಲು ಮುಂದಾಗಿದೆ.