ದೇವನಹಳ್ಳಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಎರಡು ವಿಮಾನಗಳು ವಿದೇಶದಿಂದ ಬಂದಿಳಿದಿದ್ದು, ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತೀಯರನ್ನು ಕರೆ ತರಲಾಗಿದೆ.
ಕೆಐಎಎಲ್ಗೆ ಬಂದಿಳಿದ 2 ವಿಮಾನಗಳು: ವಿದೇಶದಲ್ಲಿ ಸಿಲುಕಿದ್ದ ಭಾರತೀಯರ ಆಗಮನ - ಕೆನಡಾ
ಪಿಲಿಫೈನ್ಸ್ ಮತ್ತು ಕೆನಡಾದಿಂದ ಎರಡು ವಿಮಾನಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿವೆ.
ತಾಯ್ನಾಡಿಗೆ ಅನಿವಾಸಿ ಭಾರತೀಯರ ಆಗಮನ
ಪಿಲಿಫೈನ್ಸ್ ಮತ್ತು ಕೆನಡಾದಿಂದ ಎರಡು ವಿಮಾನಗಳು ಬಂದಿದ್ದು, ಏರ್ ಇಂಡಿಯಾ AI1321 ಮತ್ತು AI 1194 ವಿಮಾನಗಳಲ್ಲಿ ಭಾರತೀಯರು ಆಗಮಿಸಿದ್ದಾರೆ. ಕೆನಡಾದಿಂದ 45 ಜನ, ಫಿಲಿಫೈನ್ಸ್ನಿಂದ 132 ಜನ ಆಗಮಿಸಿದ್ದಾರೆ.
ಎಲ್ಲಾ ಪ್ರಯಾಣಿಕರಿಗೂ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಲಾಗಿದೆ. ಸ್ಕೀನಿಂಗ್ ಬಳಿಕ ಹೊಟೇಲ್ ಕ್ವಾರಂಟೈನ್ಗೆ ಪ್ರಯಾಣಿಕರನ್ನು ಬಿಎಂಟಿಸಿ ಬಸ್ ಮೂಲಕ ಕಳುಹಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ.