ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ):ಲಾಕ್ಡೌನ್ನಿಂದಾಗಿ ಪ್ಯಾರಿಸ್ನಲ್ಲಿ ಸಿಲುಕಿದ್ದ 172 ಕನ್ನಡಿಗರು, ಗುರುವಾರ ಸಂಜೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಪ್ಯಾರಿಸ್ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ 172 ಕನ್ನಡಿಗರು - ಪ್ಯಾರಿಸ್ನಿಂದ ಬೆಂಗಳೂರಿಗೆ 172 ಕನ್ನಡಿಗರು
ಲಾಕ್ಡೌನ್ ಪರಿಣಾಮ ಪ್ಯಾರಿಸ್ನಲ್ಲಿ ಸಿಲುಕಿದ್ದ 172 ಮಂದಿ ಅನಿವಾಸಿ ಭಾರತೀಯರು, ವಂದೇ ಭಾರತ್ ಮಿಷನ್ ಅಡಿಯ ಇಪ್ಪತ್ತೊಂದನೇ ಏರ್ ಇಂಡಿಯಾ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
ವಂದೇ ಭಾರತ್ ಮಿಷನ್ ಅಡಿಯ ಇಪ್ಪತ್ತೊಂದನೇ ಏರ್ ಇಂಡಿಯಾ ವಿಮಾನದಲ್ಲಿ 172 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ. 172 ಮಂದಿ ಪ್ರಯಾಣಿಕರಲ್ಲಿ ಒಂದು ಮಗು ಸೇರಿದಂತೆ 123 ಪುರುಷರು ಮತ್ತು 48 ಮಹಿಳೆಯರಿದ್ದಾರೆ. ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿ,14 ದಿನಗಳ ಕ್ವಾರಂಟೈನ್ಗಾಗಿ ಹೋಟೆಲ್ಗಳಿಗೆ ಕಳುಹಿಸಿಕೊಟ್ಟಿದ್ದಾರೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ.
ನಂತರ ಏರ್ ಇಂಡಿಯಾ ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇರಳದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿತು.