ಬೆಂಗಳೂರು:ಕೋವಿಡ್-19 ಸೋಂಕಿತ ಪ್ರಕರಣಗಳ ಮಹಾ ಸ್ಫೋಟವಾಗುತಿದ್ದು, ಜಿಲ್ಲೆಯಾದ್ಯಂತ ನಿನ್ನೆ 16 ಕೊರೊನಾ ಪ್ರಕರಣಗಳು ಕಂಡು ಬಂದಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿನ್ನೆ ದೇವನಹಳ್ಳಿ ತಾಲೂಕಿನಲ್ಲಿ 6, ಹೊಸಕೋಟೆ ತಾಲೂಕಿನಲ್ಲಿ 2, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 5 ಹಾಗೂ ನೆಲಮಂಗಲ ತಾಲೂಕಿನಲ್ಲಿ 3 ಪ್ರಕರಣಗಳು ವರದಿಯಾಗಿವೆ.
16 ಜನರಲ್ಲಿ ಕೊರೊನಾ ದೃಢ... ಬೆಚ್ಚಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನ - ಬೆಂಗಳೂರು ಗ್ರಾಮಾಂತರದಲ್ಲಿ 16 ಕೊರೊನಾ ದೃಢ,
ನಿನ್ನೆ ಒಟ್ಟು 16 ಜನರಲ್ಲಿ ಕೊರೊನಾ ಪ್ರಕರಣಗಳು ದೃಢವಾಗಿವೆ. ದಿನದಿಂದ ದಿನಕ್ಕೆ ಏರುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಂದಿ ಬೆಚ್ಚಿಬಿದ್ದಿದ್ದಾರೆ.
![16 ಜನರಲ್ಲಿ ಕೊರೊನಾ ದೃಢ... ಬೆಚ್ಚಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನ 16 new corona positive case, 16 new corona positive case in Bangalore Rural, Bangalore Rural corona news, 16 ಕೊರೊನಾ ದೃಢ, ಬೆಂಗಳೂರು ಗ್ರಾಮಾಂತರದಲ್ಲಿ 16 ಕೊರೊನಾ ದೃಢ, ಬೆಂಗಳೂರು ಗ್ರಾಮಾಂತರ ಕೊರೊನಾ ಸುದ್ದಿ,](https://etvbharatimages.akamaized.net/etvbharat/prod-images/768-512-7965480-980-7965480-1594358376935.jpg)
ಸಾಂದರ್ಭಿಕ ಚಿತ್ರ
ಮುಂಬೈ ವಲಸೆ ಕಾರ್ಮಿಕರ ಆಗಮನದಿಂದ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿವೆ. ನಿನ್ನೆ 16 ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 265ಕ್ಕೆ ತಲುಪಿದ್ದು, ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಆತಂಕ ಮನೆ ಮಾಡಿದೆ. ಇದುವರೆಗೂ ಕೋವಿಡ್-19ಗೆ ಜಿಲ್ಲೆಯಲ್ಲಿ 7 ಮಂದಿ ಬಲಿಯಾಗಿದ್ದಾರೆ.