ಆನೇಕಲ್: ಕೊರೊನಾ ನಿರ್ವಹಣೆಗಾಗಿ ಟೊಯೋಟಾ ಕಿರ್ಲೋಸ್ಕರ್, ವಿಪ್ರೋದ ಅಜೀಂ ಪ್ರೇಮ್ ಜಿ ಫೌಂಡೇಶನ್, ಕೆಟಿಟಿಎಂ ಖಾಸಗಿ ಕಂಪೆನಿಗಳು ಜಂಟಿಯಾಗಿ 15 ಲಕ್ಷದ ಚೆಕ್ ನೀಡುವ ಮುಖಾಂತರ ಸಾಮಾಜಿಕ ಕಳಕಳಿ ಮೆರೆದಿವೆ.
ಖಾಸಗಿ ಕಂಪನಿಗಳಿಂದ ಕೋವಿಡ್ ನಿರ್ವಹಣೆಗೆ 15 ಲಕ್ಷದ ಚೆಕ್ ವಿತರಣೆ - anekal news
ಕೊರೊನಾ ನಿರ್ವಹಣೆಗಾಗಿ ಟೊಯೋಟಾ ಕಿರ್ಲೋಸ್ಕರ್, ವಿಪ್ರೋದ ಅಜೀಂ ಪ್ರೇಮ್ ಜಿ ಫೌಂಡೇಶನ್, ಕೆಟಿಟಿಎಂ ಖಾಸಗಿ ಕಂಪೆನಿಗಳು ಜಂಟಿಯಾಗಿ 15 ಲಕ್ಷದ ಚೆಕ್ ನೀಡಿವೆ.
ಕೋವಿಡ್ ನಿರ್ವಹಣೆಗೆ 15 ಲಕ್ಷದ ಚೆಕ್ ವಿತರಣೆ
ಬೆಂಗಳೂರು ದಕ್ಷಿಣ ಶಾಸಕ ಎಂ ಕೃಷ್ಣಪ್ಪ ಮುಖಾಂತರ ಪುರಸಭೆ ಹಾಗು ನಿರ್ಹಣೆಯ ಹೊಣೆ ಹೊತ್ತ ಸಮಿತಿಗೆ ಈ ಚೆಕ್ ನೀಡಲಾಗಿದೆ.ಇನ್ನು ಕಾರ್ಯಕ್ರಮದಲ್ಲಿ ಕೋವಿಡ್ ಸಂದರ್ಭದಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನಿಸಲಾಯಿತು.
ಕಳೆದ ಆರು ತಿಂಗಳಿಂದ ಜಿಗಣಿ ಇನ್ಸ್ಫೆಕ್ಟರ್ ಕೆ ವಿಶ್ವನಾಥ್ ತಂಡ ಹಗಲಿರುಳು ವಲಸೆ ಕಾರ್ಮಿಕರಿಗೆ ವಸತಿ, ಊಟೋಪಚಾರ ನೀಡುತ್ತಿದ್ದು, ಈ ಬಗ್ಗೆ ಶಾಸಕರು ಮುಕ್ತ ಕಂಠದಿಂದ ಹೊಗಳಿದರು.