ಬೆಂಗಳೂರು :ಸುಡಾನ್‌ನಲ್ಲಿಸೇನಾಪಡೆಗಳಸಂಘರ್ಷದಿಂದಾಗಿ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದ 129 ಜನ ಕನ್ನಡಿಗರು ಆಪರೇಷನ್ ಕಾವೇರಿ ಮೂಲಕ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸಾಗಿದ್ದಾರೆ. ಸುಡಾನ್ ರಾಜಧಾನಿಯಿಂದ ಸೌದಿಯ ಜೆಡ್ಡಾ ಮೂಲಕ ಹಕ್ಕಿ ಪಿಕ್ಕಿ ಜನಾಂಗದ ಜನರು
ಇಂಡಿಗೋ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ನಿಲ್ದಾಣದಲ್ಲಿ ಬಂದಿಳಿದರು.
ಸುಡಾನ್‌ನಲ್ಲಿ ಸಿಲುಕಿರುವ ನೂರಾರು ಜನರನ್ನು ಕೇಂದ್ರ ಸರ್ಕಾರ ಆಪರೇಷನ್ ಕಾವೇರಿ ಹೆಸರಿನಲ್ಲಿ ರಾಜ್ಯಗಳಿಗೆ ಸುರಕ್ಷಿತವಾಗಿ ಕರೆದುಕೊಂಡು ಬರುತ್ತಿದೆ. ಇಂದು ಮೂರನೇ ತಂಡವಾಗಿ ವಿಮಾನ ನಿಲ್ದಾಣಕ್ಕೆ 129 ಮಂದಿ ಕನ್ನಡಿಗರು ಬಂದಿಳಿದರು. ರಾಜ್ಯ ವಿಪತ್ತು ನಿರ್ವಹಣಾ ಕಮಿಷನರ್ ಮನೋಜ್ ನೇತೃತ್ವದ ತಂಡ ಬರಮಾಡಿಕೊಂಡರು. ಕೋವಿಡ್ ಟೆಸ್ಟ್ ಮಾಡಿ ಮನೆಗೆ ಕಳುಹಿಸಿಕೊಡಲಾಗಿದೆ.
ಇದನ್ನೂ ಓದಿ :ಆಪರೇಷನ್ ಕಾವೇರಿ ಅಡಿ ಜೆಡ್ಡಾಗೆ ತಲುಪಿದ 8ನೇ ಬ್ಯಾಚ್, ಸುಡಾನ್‌ನಲ್ಲಿ ಮತ್ತೆ ಕದನ ವಿರಾಮ ಘೋಷಣೆ
ವಿಪತ್ತು ನಿರ್ವಹಣಾ ಕಮಿಷನರ್ ಮನೋಜ್ ಮಾತನಾಡಿ, ಸುಡಾನ್‌ನಲ್ಲಿ ಸಿಲುಕಿರುವವರನ್ನು ದೇಶಕ್ಕೆ ಕರೆತರುವ ಸಲುವಾಗಿ ಕೇಂದ್ರ ಸರ್ಕಾರ ಆಪರೇಷನ್ ಕಾವೇರಿ ಹೆಸರಿನಲ್ಲಿ ಕಾರ್ಯಾಚರಣೆ ಕೈಗೊಂಡಿದೆ. 14 ತಂಡಗಳು ಸುಡಾನ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಸುಮಾರು 2800 ಮಂದಿಯನ್ನು ದೇಶಕ್ಕೆ ಕರೆತರಲಾಗಿದೆ. ರಾಜ್ಯದ 257 ಮಂದಿಯನ್ನು ನಿನ್ನೆ ಮತ್ತು ಇವತ್ತು ವಾಪಸ್ ಕರೆತರಲಾಗಿದೆ. ದೆಹಲಿ, ಮುಂಬೈ ಹಾಗು ಬೆಂಗಳೂರಿನಲ್ಲಿ ವಿಪತ್ತು ನಿರ್ವಹಣಾ ತಂಡಗಳಿವೆ. ಊಟ ತಿಂಡಿ, ಆರೋಗ್ಯ ತಪಾಸಣೆ ಎಲ್ಲವನ್ನೂ ನೋಡಿಕೊಳ್ಳಲಾಗುತ್ತಿದೆ. ವಿಮಾನ ನಿಲ್ದಾಣದಿಂದ ತಮ್ಮ ತಮ್ಮ ಮನೆಯವರೆಗೂ ಕೇಂದ್ರ ಸರ್ಕಾರ ಎಲ್ಲ ವ್ಯವಸ್ಥೆ ಮಾಡಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ :ಆಪರೇಷನ್ ಕಾವೇರಿ: ತಾಯ್ನಾಡಿಗೆ ಸುರಕ್ಷಿತವಾಗಿ ಬಂದಿಳಿದ 360 ಜನರ ಮೊದಲ ತಂಡ
ಸುಡಾನ್ನಿಂದ ಮರಳಿದ ಅರವಿಂದ್ ಎಂಬವರು ಮಾತನಾಡಿ, ಸುಡಾನ್‌ನಲ್ಲಿ ಇರುವಾಗ ಜೀವವಿಲ್ಲ ರೀತಿ ಎಲ್ಲರೂ ಇದ್ದೆವು. ನಾವು ಇರುವ ಪ್ರದೇಶದ ಸುತ್ತಮುತ್ತ 15 ದಿನಗಳಿಂದ ಬಾಂಬ್ ದಾಳಿ ನಡೆಯುತ್ತಿತ್ತು. ಎಲ್ಲರೂ ಮನೆಯಲ್ಲಿದ್ದು ತಿನ್ನಲು ಆಹಾರವಿಲ್ಲದೆ, ಕುಡಿಯಲು ನೀರೂ ಇಲ್ಲದೇ ಸಮಸ್ಯೆ ಎದುರಿಸಿದ್ದೇವೆ ಎಂದು ವಿವರಿಸಿದರು.
ಇದನ್ನೂ ಓದಿ :ಸುಡಾನ್ನಿಂದ ಭಾರತೀಯರ ಸ್ಥಳಾಂತರ: 362 ಜನರ ಹೊತ್ತ ವಿಮಾನ ಜೆಡ್ಡಾದಿಂದ ಬೆಂಗಳೂರಿಗೆ ಪಯಣ