ದೊಡ್ಡಬಳ್ಳಾಪುರ (ಬೆಂ.ಗ್ರಾ): ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112 ಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ, ಈ ಹಿಂದೆ ತುರ್ತು ಸಮಯದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ಆ್ಯಂಬುಲೆನ್ಸ್ಗೆ ವಿವಿಧ ನಂಬರ್ಗೆ ಕರೆ ಮಾಡಬೇಕಿತ್ತು. ಇದರಿಂದ ಸಾರ್ವಜನಿಕರು ಸಹ ಗೊಂದಲಕ್ಕೆ ಒಳಗಾಗಿದ್ದರು. ಇದೀಗ ಎಲ್ಲ ಇಲಾಖೆಗಳಿಗೆ ಒಂದೇ ತುರ್ತು ಕರೆ ಸಂಖ್ಯೆ 112 ಆಗಿ ಬದಲಾಯಿಸಲಾಗಿದೆ.
ಕರ್ನಾಟಕದ 5 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ 112 ತುರ್ತು ಕರೆ ವ್ಯವಸ್ಥೆ ಜಾರಿ ಮಾಡಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಹ ಈ ವ್ಯವಸ್ಥೆಗೆ ಸೇರ್ಪಡೆಗೊಂಡಿದೆ. ತುರ್ತು ಸಮಯದಲ್ಲಿ ತೊಂದರೆಗೊಳಗಾದ ವ್ಯಕ್ತಿಯನ್ನು ಮೊದಲು ಸಂಪರ್ಕಿಸುವುದು ಪೊಲೀಸ್ ಸಿಬ್ಬಂದಿ, ಅಪಘಾತ ಇರಲಿ ಅಪರಾಧವಾಗಿರಲಿ ಮತ್ತು ವಿಪತ್ತು ಆಗಿರಲಿ ಆ ಸ್ಥಳಕ್ಕೆ ಮೊದಲು ತಲುಪುದು ಪೊಲೀಸ್ ಇಲಾಖೆ.
ತುರ್ತು ಸೇವೆ ನಂಬರ್ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು ತೊಂದರೆಗೊಳಗಾದ ವ್ಯಕ್ತಿಗೆ ತಕ್ಷಣಕ್ಕೆ ಬೇಕಾದ ನೆರವು ನೀಡಿ ಆತನ ರಕ್ಷಣೆ ಮಾಡಲಾಗುತ್ತದೆ. ಈ ಕಾರಣದಿಂದ ಪೊಲೀಸ್ ಇಲಾಖೆ 112 ತುರ್ತು ಕರೆಯ ಪೋರ್ಟಲ್ ವ್ಯವಸ್ಥೆ ಜಾರಿಗೆ ತರುತ್ತಿದೆ. 112 ಆ್ಯಪ್ ಸಹ ಬಿಡುಗಡೆ ಮಾಡಿದೆ. ಸ್ಮಾರ್ಟ್ಫೋನ್ನಲ್ಲಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು, ಈ ಆ್ಯಪ್ ನಲ್ಲಿ ನಿಮ್ಮ ವಿಳಾಸ ಮತ್ತು ಸಂಬಂಧಿಕರು ಮತ್ತು ಸ್ನೇಹಿತರ ಮೊಬೈಲ್ ನಂಬರ್ ದಾಖಲು ಮಾಡಬಹುದಾಗಿದೆ.
ಒಂದು ವೇಳೆ, ನೀವು ಅಪಾಯಕ್ಕೆ ಸಿಲುಕಿದ್ದಾಗ ತಕ್ಷಣವೇ ಆ್ಯಪ್ ಓಪನ್ ಮಾಡಿ 112ಗೆ ಕರೆ ಮಾಡಿದಾಗ ಕೇಂದ್ರ ಕಂಟ್ರೋಲ್ ರೂಮಿಗೆ ಕರೆ ಹೋಗುತ್ತದೆ, ನೀವು ಕರೆ ಮಾಡಿದ ತಕ್ಷಣವೇ ನಿಮ್ಮ ಲೋಕೇಷನ್ ಸಹ ಕಂಟ್ರೋಲ್ ರೂಂಗೆ ಹೋಗುತ್ತದೆ. ಮೂರು ಸ್ಟೇಷನ್ಗೆ ಒಂದು ತುರ್ತು ವಾಹನ ನೀಡಲಾಗಿದ್ದು, ನೀವಿರುವ ಸ್ಥಳದ ಸಮೀಪದಲ್ಲಿನ ಎಮರ್ಜೆನ್ಸಿ ವೆಹಿಕಲ್ ನಿಮ್ಮ ಬಳಿಗೆ ಬರುತ್ತದೆ ನಿಮಗೆ ಅಗತ್ಯವಾದ ನೆರವು ನೀಡಿ ರಕ್ಷಣಾ ಕಾರ್ಯ ಮಾಡಲಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ತೊಂದರೆಗೊಳಗಾದ ವ್ಯಕ್ತಿ 112ಕ್ಕೆ ಕರೆ ಮಾಡಿದಾಗ ಅಪಘಾತವಾಗಿದ್ದಲ್ಲಿ ಆಸ್ಪತ್ರೆಗೆ ಕರೆಯನ್ನು ವರ್ಗಾವಣೆ ಮಾಡಲಾಗುತ್ತದೆ. ಅಪರಾಧವಾಗಿದ್ದಲ್ಲಿ ಪೊಲೀಸ್ ಇಲಾಖೆಗೆ ಮತ್ತು ವಿಪತ್ತು ಸಂಭವಿಸಿದ್ದಲ್ಲಿ ಅಗ್ನಿಶಾಮಕ ದಳಕ್ಕೆ ನಿಮ್ಮ ಕರೆಯನ್ನು ವರ್ಗಾವಣೆ ಮಾಡುತ್ತದೆ. ಇದರಿಂದ ತುರ್ತು ಸಮಯದಲ್ಲಿ ನಿಮಗೆ ಅಗತ್ಯವಾದ ನೆರವು ನೀಡುವುದರ ಜೊತೆಗೆ ನಿಮ್ಮ ರಕ್ಷಣೆಯ ಕಾರ್ಯ ಮಾಡುತ್ತದೆ.
ಪ್ಯಾನಿಕ್ ಅಲರ್ಟ್ಗಾಗಿ ಸಾಮಾನ್ಯ ಮೊಬೈಲ್ನಲ್ಲಿ 5 ಮತ್ತು 9 ಸಂಖ್ಯೆಯನ್ನು ಲಾಂಗ್ ಪ್ರೆಸ್ ಮಾಡಬೇಕು, ಸ್ಮಾರ್ಟ್ಫೋನ್ ಆಗಿದ್ದಲ್ಲಿ ಪವರ್ ಬಟನ್ ಅನ್ನು ವೇಗವಾಗಿ 3 ರಿಂದ 5 ಬಾರಿ ಒತ್ತಿದರೆೆ ನೀವು ಅಪಾಯದಲ್ಲಿರುವ ಮಾಹಿತಿ ಕಂಟ್ರೋಲ್ ರೂಂಗೆ ಹೋಗಲಿದೆ.