ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಾಣಿಕೆ ಮಾಡುತ್ತಿದ್ದ ಜಾಲವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಟ್ರಾಲಿ ಬ್ಯಾಗ್ ವ್ಹೀಲ್ನಲ್ಲಿ ಅಕ್ರಮ ಚಿನ್ನ ಸಾಗಾಣಿಕೆ: 11 ಲಕ್ಷ ಮೌಲ್ಯದ ಚಿನ್ನ ವಶಕ್ಕೆ - gold seized in kempegowda international airport
ಟ್ರಾಲಿ ಬ್ಯಾಗ್ ಚಕ್ರದಲ್ಲಿ ಚಿನ್ನವನ್ನಟ್ಟುಕೊಂಡು ಮತ್ತು ಚಪ್ಪಲಿಯೊಳಗೆ ದಾಖಲೆರಹಿತ ಚಿನ್ನವನ್ನು ಬಚ್ಚಿಟ್ಟುಕೊಂಡು ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎರಡು ಪ್ರಕರಣಗಳಿಂದ ಒಟ್ಟು ಒಟ್ಟು 11 ಲಕ್ಷ ಮೌಲ್ಯದ ದಾಖಲೆರಹಿತ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
![ಟ್ರಾಲಿ ಬ್ಯಾಗ್ ವ್ಹೀಲ್ನಲ್ಲಿ ಅಕ್ರಮ ಚಿನ್ನ ಸಾಗಾಣಿಕೆ: 11 ಲಕ್ಷ ಮೌಲ್ಯದ ಚಿನ್ನ ವಶಕ್ಕೆ 11 lakhs gold seized in kempegowda international airport](https://etvbharatimages.akamaized.net/etvbharat/prod-images/768-512-11177418-thumbnail-3x2-surya.jpg)
ಟ್ರಾಲಿ ಬ್ಯಾಗ್ ವ್ಹೀಲ್ನಲ್ಲಿ ಅಕ್ರಮ ಚಿನ್ನ ಸಾಗಾಣಿಕೆ
ಕಸ್ಟಮ್ಸ್ ಅಧಿಕಾರಿಗಳಿಗೆ ಸಣ್ಣ ಸುಳಿವು ಸಹ ಸಿಗದ ರೀತಿಯಲ್ಲಿ ಟ್ರಾಲಿ ಬ್ಯಾಗಿನ ಚಕ್ರದೊಳಗೆ ಚಿನ್ನ ಸಾಗಾಣಿಕೆ ಮಾಡುವ ಜಾಲ ಮತ್ತು ಚಪ್ಪಲಿಯೊಳಗೆ ಚಿನ್ನವನ್ನ ಮರೆಮಾಚಿ ಸಾಗಿಸುತ್ತಿದ್ದ ಎರಡು ಪ್ರಕರಣಗಳನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ. ಎರಡು ಪ್ರಕರಣಗಳಿಂದ 11 ಲಕ್ಷ ಮೌಲ್ಯದ ಚಿನ್ನ ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.