ಕರ್ನಾಟಕ

karnataka

ETV Bharat / state

ಸ್ಯಾನ್ ಫ್ರಾನ್ಸಿಸ್ಕೋದಿಂದ ಬಂದ ಕನ್ನಡಿಗರು... ಏರ್​​​ಪೋರ್ಟ್​ನಲ್ಲೇ ಸ್ಕ್ರೀನಿಂಗ್​ ಬಳಿಕ ಕ್ವಾರಂಟೈನ್​​ಗೆ ರವಾನೆ - San Francisco

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಿಲುಕಿದ್ದ 107 ಕನ್ನಡಿಗರನ್ನ ಹೊತ್ತ ವಿಮಾನ ಇಂದು ಬೆಳಿಗ್ಗೆ 9-30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಇಂದು ಆಗಮಿಸಿದ ವಿಮಾನ ಸೇರಿ ಕೆಐಎಎಲ್​​ಗೆ ನಾಲ್ಕು ವಿಮಾನಗಳು ಬಂದಿವೆ.

107 kannadigas arrived home from San Francisco
ಸ್ಯಾನ್ ಫ್ರಾನ್ಸಿಸ್ಕೋ ದೇಶದಿಂದ 107 ಕನ್ನಡಿಗರು   ತಾಯ್ನಾಡಿಗೆ ಆಗಮನ

By

Published : May 15, 2020, 1:51 PM IST

ದೇವನಹಳ್ಳಿ: ಲಾಕ್​ಡೌನ್​​ ಹಿನ್ನೆಲೆ ವಿದೇಶದಲ್ಲಿ ಸಿಲುಕಿದ್ದ ಕನ್ನಡಿಗರನ್ನ ಕರೆ ತರುವ ವಂದೇ ಭಾರತ್ ಮಿಷನ್ ಅಡಿಯ ನಾಲ್ಕನೇ ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಬಂದಿಳಿದಿದ್ದು, ಸ್ಯಾನ್ ಫ್ರಾನ್ಸಿಸ್ಕೋದಿಂದ ಸುಮಾರು 107 ಪ್ರಯಾಣಿಕರು ಇಂದು ಬೆಳಿಗ್ಗೆ ತಾಯ್ನಾಡಿಗೆ ಮರಳಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋದಿಂದ ಬಂದ ಕನ್ನಡಿಗರು
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಿಲುಕಿದ್ದ 107 ಕನ್ನಡಿಗರನ್ನ ಹೊತ್ತ ವಿಮಾನ ಇಂದು ಬೆಳಿಗ್ಗೆ 9-30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದೆ. ಇಂದು ಆಗಮಿಸಿದ ವಿಮಾನ ಸೇರಿ ಕೆಐಎಎಲ್​​ಗೆ ನಾಲ್ಕು ವಿಮಾನಗಳು ಬಂದಿವೆ. ಆಗಮಿಸಿದ ಎಲ್ಲಾ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾಡಲಾಗಿದ್ದು, ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕ್ವಾರಂಟೈನ್ ಸೆಂಟರ್​ಗಳಿಗೆ ಬಿಎಂಟಿಸಿ ಬಸ್​ಗಳಲ್ಲಿ ಕಳಿಸಲಾಗಿದೆ. 107 ಪ್ರಯಾಣಿಕರಲ್ಲಿ 59 ಪುರುಷರು, 48 ಮಹಿಳೆಯರಿದ್ದು, ಇದರಲ್ಲಿ ಒಬ್ಬರು ಗರ್ಭಿಣಿ, 10 ವರ್ಷದ ಒಳಗಿನ ಒಂದು ಮಗು ಸಹ ಇದೆ. ನಿನ್ನೆ ಸಿಂಗಾಪೂರ್​​ನಿಂದ 152 ಪ್ರಯಾಣಿಕರು ಆಗಮಿಸಿದ್ದರು. ಅಲ್ಲದೇ 17ರಂದು ಮತ್ತೊಂದು ವಿಮಾನ ಆಗಮಿಸಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾಹಿತಿ ನೀಡಿದರು.

For All Latest Updates

ABOUT THE AUTHOR

...view details