ನೆಲಮಂಗಲ:ತಿಗಳರ ಪತ್ತಿನ ಸಹಕಾರ ಸಂಘದ 10ನೇ ವಾರ್ಷಿಕ ಮಹಾಸಭೆ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸುಮಾರು 70 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿತ್ತು.
10 ವಸಂತ ಪೂರೈಸಿದ ನೆಲಮಂಗಲ ತಾಲೂಕು ತಿಗಳರ ಪತ್ತಿನ ಸಹಕಾರ ಸಂಘ: ವಿದ್ಯಾರ್ಥಿಗಳಿಗೆ ಸನ್ಮಾನ - ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ನೆಲಮಂಗಲ ತಾಲೂಕು ತಿಗಳರ ಪತ್ತಿನ ಸಹಕಾರ ಸಂಘದ 10ನೇ ವಾರ್ಷಿಕ ಮಹಾಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸುಮಾರು 70 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಮಾತನಾಡಿದ ತಿಗಳರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅರ್ಜುನ್, ಯಾವ ಸಮುದಾಯದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗಿರುತ್ತದೋ ಆ ಸಮಾಜ ಮುಖ್ಯವಾಹಿನಿಯಲ್ಲಿ ಉತ್ತಮ ಸ್ಥಿತಿ ತಲುಪಲು ಸಾಧ್ಯ ಎಂದರು.
ನಮ್ಮ ತಿಗಳರ ಜನಾಂಗದ ವಿದ್ಯಾರ್ಥಿಗಳನ್ನು ಸನ್ಮಾನಿಸಿದಾಗ ನಮ್ಮ ವಿದ್ಯಾಭ್ಯಾಸದ ಜೊತೆ ಜನಾಂಗ ಇದೆ ಎನ್ನುವ ಭಾವನೆ ಬರುತ್ತದೆ. ಅಲ್ಲದೇ ನಮ್ಮ ಸಂಘದ ಕ್ಷೇಯೋಭಿವೃದ್ಧಿಗೆ ಹಣವನ್ನು ಹೂಡಿಕೆ ಮಾಡಿ ಸಂಘ ನಿಮ್ಮ ಜೊತೆ ಇದೆ ಎಂದು ತಿಳಿಸಿದ್ದೇವೆ ಎಂದರು.