ಬಾಗಲಕೋಟೆ :ಗುಳೇದಗುಡ್ಡ ಪಟ್ಟಣದಲ್ಲಿ ಯುಗಾದಿ ಪಾಂಡ್ಯದಿನ ದಂದು ಮಳೆ, ಬೆಳೆ ಸೇರಿದಂತೆ ರಾಜಕೀಯ ಹಾಗೂ ವ್ಯಾಪಾರ, ವಹಿವಾಟು ಬಗ್ಗೆ ಭವಿಷ್ಯ ಹೇಳುವ ವಿಶೇಷ ಪದ್ದತಿಯನ್ನು ಆಚರಿಸಿಕೊಂಡು ಬರಲಾಗುತ್ತದೆ. ಹಲವು ವರ್ಷಗಳಿಂದ ಇಂತಹ ಪದ್ದತಿಯನ್ನು ಮಾಡಿಕೊಂಡು ಬರುತ್ತಿದ್ದು, ಯುಗಾದಿ ದಿನದಂದು ಬೆಳಗಿನ ಜಾವ ಭವಿಷ್ಯ ಕೇಳಲು ಒಂದೆಡೆ ಜನ ಸೇರಿರುತ್ತಾರೆ.
ಗುಳೇದಗುಡ್ಡದ ಇಲಾಳ ಮೇಳದಿಂದ ಮಳೆ, ಬೆಳೆ ಭವಿಷ್ಯ ನುಡಿಯುವ ವಾಡಿಕೆ ಹಿಂದಿನ ಕಾಲದಿಂದಲೂ ಬಂದಿದೆ. ಪಟ್ಟಣದ ಮಾರವಾಡಿ ಬಗಿಚ್ದಲ್ಲಿ, ನಾಗಪ್ಪ ಚಿಂದಿ ಹಾಗೂ ಮಲ್ಲೇಶ್ ಗೊಬ್ಬಿ ಎಂಬುವರು ಭವಿಷ್ಯ ಸಾರ ತಿಳಿಸುತ್ತಾರೆ. ಪ್ರಸಕ್ತ ವರ್ಷ ಮಳೆ, ಬೆಳೆ ಭರ್ಜರಿ ಇದೆ. ಗುಳೇದಗುಡ್ಡದ ಖಣ ಸೇರಿ ಜವಳಿ ವ್ಯಾಪಾರ ಉತ್ತಮವಾಗಿದೆ. ಭೂಮಿ ಕುಸಿಯುವ ಅಪಾಯ ಇದ್ದು, ಅಪಾರ ವಾಹನಗಳಿಗೆ ದಕ್ಕೆ ಆಗಲಿದೆ ಎಂದು ತಿಳಿಸಿದ್ದಾರೆ.
ಆಕಾಶದಲ್ಲಿ ಹಾರಾಡುವ ವಿಮಾನವೊಂದು ಮುಟ್ಟುವ ಜಾಗ ತಲುಪದೇ ಬೇರೆ ಕಡೆಗೆ ಹೋಗಲಿದೆ. ಗಾಳಿ ಅತ್ಯಂತ ವೇಗವಾಗಿ ಬೀಸಲಿದೆ. ಗಿಡಮರಗಳು ಉರಳಲಿವೆ, ಪ್ರಾಣಿಪಕ್ಷಿಗಳಿಗೆ ಹಾನಿ ಆಗಲಿದೆ. ಈ ವರ್ಷ ಮೂರು ರಾಜ್ಯಗಳಲ್ಲಿ ಮಿಂಚು ಗುಡುಗುಗಳ ಆರ್ಭಟ ಹೆಚ್ಚಾಗಿರುತ್ತೆ ಅಂತಾ ಭವಿಷ್ಯ ಹೇಳಿದ್ದಾರೆ. ಎಕ್ಕೆ ಎಲೆ ಹಾಗೂ ಹೂವು ಹಿಡಿದು ಫಲ ಭವಿಷ್ಯ ಹೇಳುವುದು ವಿಶೇಷ.