ಬಾಗಲಕೋಟೆ:ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ಇರುವ ಹರಿದ್ರಾತೀರ್ಥ ಪುಷ್ಕರಣಿಯಲ್ಲಿ ಮುಳುಗಿ ಯುವಕ ಮೃತ ಪಟ್ಟಿರುವ ಘಟನೆ ನಡೆದಿದೆ.
ಬನಶಂಕರಿ ದೇವಸ್ಥಾನದ ಮುಂದಿರುವ ಹರಿದ್ರಾತೀರ್ಥದಲ್ಲಿ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ನಿವಾಸಿ ಶಿವಕುಮಾರ ಗರಡ್ಡಿ (24) ಈಜಲು ಹೋಗಿ ನೀರುಪಾಲಾಗಿದ್ದಾನೆ.
ಬನಶಂಕರಿ ಜಾತ್ರೆಗೆ ತೆರಳಿದ ಯುವಕ ನೀರುಪಾಲು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ನಿವಾಸಿ ಶಿವಕುಮಾರ ಗರಡ್ಡಿ (24) ಬನಶಂಕರಿ ಜಾತ್ರೆಗೆ ಆಗಮಿಸಿದ್ದನು. ಈ ವೇಳೆ, ಬನಶಂಕರಿ ದೇವಸ್ಥಾನದ ಮುಂದಿರುವ ಹರಿದ್ರಾತೀರ್ಥದಲ್ಲಿ ಶಿವಕುಮಾರ ಗರಡ್ಡಿ ಈಜಲು ಹೋಗಿ ನೀರುಪಾಲಾಗಿದ್ದಾನೆ.
ಸ್ನೇಹಿತರೊಂದಿಗೆ ಸ್ನಾನಕ್ಕೆ ಹೋದಾಗ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಬಾದಾಮಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಶವಕ್ಕಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ಕೈಗೊಂಡಿದ್ದಾರೆ.