ಕರ್ನಾಟಕ

karnataka

ETV Bharat / state

ವಿಧಾನಸಭೆ ಚುನಾವಣೆ: ಯುವ ನಾಯಕರಿಗೆ ಹೆಚ್ಚು ಆದ್ಯತೆ - Assembly elections

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯುವ ನಾಯಕರ ಪಾತ್ರ ಪ್ರಮುಖವಾಗಲಿದ್ದು, ಬಾಗಲಕೋಟೆಯಲ್ಲಿ ಈಗಾಗಲೇ ಯುವ ಮುಖಂಡರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಬಾಗಲಕೋಟೆ ವಿಧಾನಸಭೆ ಚುನಾವಣೆ
ಬಾಗಲಕೋಟೆ ವಿಧಾನಸಭೆ ಚುನಾವಣೆ

By

Published : Feb 4, 2021, 1:55 PM IST

ಬಾಗಲಕೋಟೆ: ವಿಧಾನಸಭೆ ಚುನಾವಣೆಗೆ ಇನ್ನೂ 2 ವರ್ಷಗಳ ಕಾಲಾವಕಾಶವಿದ್ದು, ಈಗಾಗಲೇ ಎಲ್ಲಾ ಪಕ್ಷಗಳು ಚುನಾವಣಾ ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ. ಅದರಲ್ಲೂ ಮುಂಬರುವ ಚುನಾವಣೆಯಲ್ಲಿ ಯುವ ನಾಯಕರ ಪಾತ್ರ ಪ್ರಮುಖವಾಗಲಿದೆ ಎಂದು ಹೇಳಲಾಗುತ್ತಿದೆ.

ಹೌದು, ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಜಮಖಂಡಿ ಕ್ಷೇತ್ರದ ಶಾಸಕರಾದ ಆನಂದ ನ್ಯಾಮಗೌಡ ಯುವ ನಾಯಕರಾಗಿ ಮಿಂಚುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಹೊಳಬಸು ಶೆಟ್ಟರ್​ ಸಹ ಯುವ ನಾಯಕರಾಗಿದ್ದು, ಜಿಲ್ಲೆಯಲ್ಲಿ ಸಿದ್ದರಾಮಯ್ಯ ಮೂಲಕ ತಮ್ಮದೇ ಆದ ಹಿಡಿತ ಸಾಧಿಸುತ್ತಿದ್ದಾರೆ. ಹೀಗಾಗಿ ಹೊಳಬಸು ಶೆಟ್ಟರ್​ ಸಹ ಮುಂದಿನ ಯುವ ನಾಯಕರಾಗಿ ಹೊರ ಹೊಮ್ಮುವ ಸಾಧ್ಯತೆ ಇದೆ.

ಕಾಂಗ್ರೆಸ್ ಪಕ್ಷದ ವಕ್ತಾರ ನಾಗರಾಜ ಹದ್ಲಿ ಸಹ ಬಾಗಲಕೋಟೆ ಮತಕ್ಷೇತ್ರದಲ್ಲಿ ಯುವ ನಾಯಕರಾಗಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಇನ್ನು ಬಿಜೆಪಿ ಪಕ್ಷದಲ್ಲಿ ಯುವ ನಾಯಕನಾಗಿ ಸಂತೋಷ ಹೊಕ್ರಾಣಿ ಬೆಳೆಯುತ್ತಿದ್ದರು. ಆದರೆ, ಶಾಸಕ ವೀರಣ್ಣ ಚರಂತಿಮಠ ನಡುವೆ ವೈಮನಸ್ಸು ಉಂಟಾದ ಹಿನ್ನೆಲೆ ಮುಂದಿನ ದಾರಿ ಹೇಗೆ ಎಂದು ಗೊಂದಲದಲ್ಲಿದ್ದಾರೆ ಎನ್ನಲಾಗಿದೆ.

ಇದರ ಜೊತೆಗೆ ಬಿಜೆಪಿ ಪಕ್ಷದಲ್ಲಿ ರಾಜು ನಾಯ್ಕರ, ಬಸು ಯಂಕಚಿ ಸೇರಿದಂತೆ ಇತರ ಯುವ ಮುಖಂಡರು ಪಕ್ಷದಲ್ಲಿ ಉತ್ಸಾಹ ಬೆಳೆಸಿಕೊಳ್ಳುತ್ತಿರುವುದು ಗಮನ ಸೆಳೆಯುತ್ತಿದೆ. ಜೆಡಿಎಸ್ ಪಕ್ಷದ ನೆಲೆಯೇ ಇಲ್ಲದ ಈ ಭಾಗದಲ್ಲಿ ಯುವ ಮುಖಂಡ ಹನಮಂತ ಮಾವಿನಮರದ ಸಾರಥ್ಯದಲ್ಲಿ ಪಕ್ಷ ಸಂಘಟನೆಗೆ ವರಿಷ್ಠರು ಒತ್ತು ನೀಡುವ ಕೆಲಸ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಯುವ ಸಮೂಹದ ಪಾತ್ರ ಹೆಚ್ಚಿರುವ ಕಾರಣ ಪ್ರಮುಖ ಮೂರು ಪಕ್ಷಗಳಲ್ಲಿ ಯುವಕರಿಗೆ ಆದ್ಯತೆ ‌ನೀಡಲಾಗುತ್ತಿದೆ.

ABOUT THE AUTHOR

...view details