ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ನ. 17ರಿಂದ 23ರವರೆಗೆ ಯೋಗ ಸಪ್ತಾಹ - latest bagalakote news

ಬಾಗಲಕೋಟೆಯಲ್ಲಿ ನ. 17ರಿಂದ 23ರವರೆಗೆ ಯೋಗ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಒಂದು ವಾರಗಳ ಕಾಲ ಯೋಗ ಶಿಬಿರ ಆಯೋಜಿಸಲಾಗಿದೆ.

ಬಾಗಲಕೋಟೆಯಲ್ಲಿ ನವಂಬರ್ 17 ರಿಂದ 23ರವರೆಗೆ ಯೋಗ ಸಪ್ತಾಹ ದಿನಾಚರಣೆ

By

Published : Nov 16, 2019, 2:00 PM IST

ಬಾಗಲಕೋಟೆ: ನಗರದಲ್ಲಿ ನ. 17ರಿಂದ 23ರವರೆಗೆ ಯೋಗ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ನ. 17ರಿಂದ 23ರವರೆಗೆ ಯೋಗ ಸಪ್ತಾಹ

ಬಸವೇಶ್ವರ ವಿದ್ಯಾವರ್ಧಕ ಸಂಘ ಮಿನಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಶ್ವಾಸ ಯೋಗ ಪೀಠದ ಶ್ರೀ ವಚನಾನಂದ ಮಹಾಸ್ವಾಮೀಜಿ ನೇತೃತ್ವದಲ್ಲಿ ಪ್ರತಿನಿತ್ಯ ಬೆಳ್ಳಿಗೆ 5-30ರಿಂದ 7-30ರವರೆಗೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಯೋಗ ಶಿಬಿರ ಆಯೋಜಿಸಲಾಗಿದೆ. ಜೊತೆಗೆ ಪ್ರತಿ ದಿನ ಸಂಜೆ ಹೃದಯ ರೋಗ ಹಾಗೂ ಮಧುಮೇಹ ತಜ್ಞರು, ನರ ತಜ್ಞರು ಹಾಗೂ ಸ್ತ್ರೀರೋಗ ತಜ್ಞರು ಸೇರಿದಂತೆ ವಿವಿಧ ತಜ್ಞರು ಆಗಮಿಸಿ ಉಪನ್ಯಾಸ ನೀಡಲಿದ್ದಾರೆ ಎಂದರು.

ನವನಗರ, ವಿದ್ಯಾಗಿರಿಯಿಂದ ಬೆಳ್ಳಿಗೆ 5 ಗಂಟೆಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಒಂದು ವಾರ ಈ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ABOUT THE AUTHOR

...view details