ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಯೋಗ ಸಪ್ತಾಹದ ಸಮಾರೋಪ ಸಮಾರಂಭ - ಬಾಗಲಕೋಟೆ ಸುದ್ದಿ

ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಯೋಗ ಸಪ್ತಾಹವು ಇಂದು ಸಮಾರೋಪಗೊಂಡಿತು.

ಬಾಗಲಕೋಟೆಯಲ್ಲಿ ಯೋಗ ಸಪ್ತಾಹ ಸಮಾರೋಪ ಸಮಾರಂಭ

By

Published : Nov 23, 2019, 11:31 PM IST

Updated : Nov 23, 2019, 11:54 PM IST


ಬಾಗಲಕೋಟೆ:ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಯೋಗ ಸಪ್ತಾಹವು ಇಂದು ಸಮಾರೋಪಗೊಂಡಿತು.

ಬಾಗಲಕೋಟೆಯಲ್ಲಿ ಯೋಗ ಸಪ್ತಾಹ ಸಮಾರೋಪ ಸಮಾರಂಭ

ಯೋಗ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳು ಪ್ರತಿದಿನ ಬೆಳಗ್ಗೆ ಯೋಗ ಶಿಬಿರ ಹಾಗೂ ಸಂಜೆ ಸಮಯದಲ್ಲಿ ಉಪನ್ಯಾಸ ನೀಡುವ ಮೂಲಕ ಯೋಗದ ಮಹತ್ವ ಸಾರಿ, ಆರೋಗ್ಯವನ್ನ ಯಾವ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಿದ್ರು.

ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಜಾನಪದ ವಿದ್ವಾಂಸ ಹಾಗೂ ಸಾಹಿತಿ ಆಗಿರುವ ಪ್ರೊಫೆಸರ್ ಶಂಭು ಬಳಿಗಾರ, ಹಿಂದಿನ ಕಾಲದ ಜನತೆ ತಮ್ಮ ಕೆಲಸದಲ್ಲಿ ಯೋಗ ಕಾಣುತ್ತಿದ್ದರು. ಅಲ್ಲದೆ, ಯಾವುದೇ ರಾಸಾಯನಿಕ ಪದಾರ್ಥ ಇಲ್ಲದ ರೊಟ್ಟಿ, ತರಕಾರಿ ಬಾಜಿ ಸೇರಿದಂತೆ ಜವಾರಿ ಊಟ ಮಾಡುತ್ತಿದ್ದರು. ಇದರಿಂದ ಯಾವುದೇ ರೋಗ ರುಜಿಗಳು ಬರುತ್ತಿದ್ದಿಲ್ಲ. ಈಗ ಊಟವೇ ವಿಷಕಾರಿ ಆಗುತ್ತಿದೆ. ಫಿಜಾ ಬರ್ಗರ್​​ನಂತಹ ಪದಾರ್ಥಗಳನ್ನ ಸೇವನೆ ಮಾಡುವ ಜೊತೆಗೆ ಸದಾ ಟೆನಷನ್​ನಲ್ಲಿ ಇರುವುದು ಅನಾರೋಗ್ಯಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಯೋಗ ಮಾಡುವುದು ಅಗತ್ಯವಿದೆ ಎಂದರು.

Last Updated : Nov 23, 2019, 11:54 PM IST

ABOUT THE AUTHOR

...view details