ಕರ್ನಾಟಕ

karnataka

ETV Bharat / state

ಗಮನ ಸೆಳೆದ ಬನಹಟ್ಟಿ ಜಂಗಿ ನಿಖಾಲಿ ಕುಸ್ತಿ ಪಂದ್ಯ: 50ಕ್ಕೂ ಹೆಚ್ಚು ಕುಸ್ತಿ ಪಟುಗಳು ಭಾಗಿ - ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ಜಾತ್ರೆ

ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ನಿರ್ಮಾಣಗೊಂಡಿರುವ ಮೈದಾನದಲ್ಲಿ ಸ್ಥಳೀಯ ಗಣ್ಯರಾದ ವೀರಭದ್ರಪ್ಪ ಮೈದಾನದ ಪೂಜೆ ನೆರವೇರಿಸಿ ಕುಸ್ತಿ ಪಂದ್ಯಾವಳಿಗೆ ಅದ್ಧೂರಿ ಚಾಲನೆ ನೀಡಿದರು. ಸುಮಾರು 50ಕ್ಕೂ ಹೆಚ್ಚು ಜೋಡಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಜನರ ಮೆಚ್ಚುಗೆಗೆ ಪಾತ್ರರಾದರು. ಇನ್ನು ಪುಟಾಣಿ ಕುಸ್ತಿ ಪಟುಗಳು ಪಂದ್ಯದಲ್ಲಿ ಭಾಗವಹಿಸಿ ನೋಡುಗರ ಗಮನ ಸೆಳೆದರು.

Wrestling competition

By

Published : Sep 19, 2019, 10:30 AM IST

ಬಾಗಲಕೋಟೆ:ಉತ್ತರ ಕರ್ನಾಟಕದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಮಹತ್ವವಿದೆ. ಯಾವುದೇ ಜಾತ್ರೆ, ಉತ್ಸವ ನಡೆಸಿದರೂ ಕುಸ್ತಿ, ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ಜಾತ್ರೆ ನಿಮಿತ್ತ ಅಂತಾರಾಷ್ಟ್ರೀಯ ಮಟ್ಟದ ಜಂಗಿ ನಿಖಾಲಿ ಕುಸ್ತಿಯನ್ನು ಹಮ್ಮಿಕೊಳ್ಳಲಾಗಿತ್ತು.

ಗಮನ ಸೆಳೆದ ಬನಹಟ್ಟಿ ಜಂಗಿ ನಿಖಾಲಿ ಕುಸ್ತಿ ಪಂದ್ಯ

ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ನಿರ್ಮಾಣಗೊಂಡಿರುವ ಮೈದಾನದಲ್ಲಿ ಸ್ಥಳೀಯ ಗಣ್ಯರಾದ ವೀರಭದ್ರಪ್ಪ ಭದ್ರನವರು ಮೈದಾನದ ಪೂಜೆ ನೆರವೇರಿಸಿ ಕುಸ್ತಿ ಪಂದ್ಯಾವಳಿಗೆ ಅದ್ಧೂರಿ ಚಾಲನೆ ನೀಡಿದರು.

ಈ ಕುಸ್ತಿ ಪಂದ್ಯದಲ್ಲಿ ನಮ್ಮ ರಾಜ್ಯದಿಂದ ಮಾತ್ರವಲ್ಲದೇ ವಿವಿಧ ರಾಜ್ಯಗಳಾದ ಮಹಾರಾಷ್ಟ್ರಗಳಿಂದಲೂ ಕುಸ್ತಿ ಪಟುಗಳು ಆಗಮಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಸುಮಾರು 50ಕ್ಕೂ ಹೆಚ್ಚು ಜೋಡಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಜನರ ಮೆಚ್ಚುಗೆಗೆ ಪಾತ್ರರಾದರು. ಇನ್ನು ಪುಟಾಣಿ ಕುಸ್ತಿ ಪಟುಗಳು ಪಂದ್ಯದಲ್ಲಿ ಭಾಗವಹಿಸಿ ನೋಡುಗರ ಗಮನ ಸೆಳೆದರು.

ಹರಿದು ಬಂದ ಜನಸಾಗರ:
ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಲು ಅನೇಕ ಗ್ರಾಮ ಮತ್ತು ಪಟ್ಟಣಗಳಿಂದ ಅಪಾರ ಪ್ರಮಾಣದ ಜನಸಾಗರವೇ ಹರಿದು ಬಂದಿತ್ತು. ಬೃಹತ್ ಎರಡು ಪರದೆಗಳ ಮೇಲೆ ನೇರ ಚಿತ್ರೀಕರಣ ವೀಕ್ಷಿಸಲು ಸಾವಿರಾರು ಜನ ಜಮಾಯಿಸಿದ್ದು, ವಿಶೇಷವಾಗಿತ್ತು.

ಈ ಪಂದ್ಯಾವಳಿಯಲ್ಲಿ ಶಾಸಕ ಸಿದ್ದು ಸವದಿ, ಮಾಜಿ ಸಚಿವೆ ಉಮಾಶ್ರೀ, ಡಾ.ಪದ್ಮಜೀತ ನಾಡಗೌಡ ಪಾಟೀಲ್​​, ಕುಸ್ತಿ ಸಮಿತಿಯ ಅಧ್ಯಕ್ಷ ಚನವೀರಪ್ಪ ಹಾದಿಮನಿ, ಮಂಗಳವಾರ ಪೇಟೆ ದೈವ ಮಂಡಳಿಯ ಅಧ್ಯಕ್ಷ ಶ್ರೀಶೈಲ ಧಬಾಡಿ, ರಾಜೇಂದ್ರ ಭದ್ರನವರ, ಬೃಜ್‍ಮೋಹನ ಡಾಗಾ, ಭೀಮಶಿ ಮಗದುಮ್, ಮಲ್ಲಿಕಾರ್ಜುನ ಬಣಕಾರ, ಸಿದ್ರಾಮ ಸವದತ್ತಿ, ಶಂಕರ ಸೋರಗಾವಿ, ಧರೆಪ್ಪ ಉಳ್ಳಾಗಡ್ಡಿ, ಚಂದ್ರು ಪಟ್ಟಣ, ಧರೆಪ್ಪ ಸಾಂಗ್ಲಿಕರ್ ಸೇರಿದಂತೆ ಅನೇಕರು ಇದ್ದರು.

ABOUT THE AUTHOR

...view details