ಕರ್ನಾಟಕ

karnataka

ETV Bharat / state

ಜೀವನೋಪಾಯಕ್ಕೆ ದೇವಿ ಹೊತ್ತು ತಿರುಗುವ ಕುಟುಂಬ - ಬಾಗಲಕೋಟೆಯ ಅಲೆಮಾರಿ ಕುಟುಂಬ

ಜೀವನ ಸಾಗಿಸಲು ದುರ್ಗಾ ದೇವಿ ಹೊತ್ತು ಅಲೆಯುವ ಅಲೆಮಾರಿ ಕುಟುಂಬದ ನಿತ್ಯ ಕೆಲಸವಿದು. ಹಳ್ಳಿ, ಗಲ್ಲಿಗಳಿಗೆ ಹೋಗಿ ದವಸ-ಧಾನ್ಯ ಸ್ವೀಕರಿಸಲಾಗುತ್ತದೆ.

worship to god in bagalkote
ಜೀವನೋಪಾಯಕ್ಕೆ ದೇವಿ ಹೊತ್ತು ತಿರುಗುವ ಕುಟುಂಬ

By

Published : Sep 2, 2020, 6:33 PM IST

ಬಾಗಲಕೋಟೆ: ಜೀವನ ಸಾಗಿಸಲು ದೇವರನ್ನೆ ಹೊತ್ತುಕೊಂಡು ಊರು ಊರು ಅಲೆಯುವ ಕುಟುಂಬಗಳು ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಇವೆ.

ಜೀವನೋಪಾಯಕ್ಕೆ ದೇವಿ ಹೊತ್ತು ತಿರುಗುವ ಕುಟುಂಬ

ಹೀಗೆ ಪುಟ್ಟಿಯಲ್ಲಿ ದುರ್ಗಾ ದೇವಿಯನ್ನು ಇಟ್ಟು ಊರು ಊರು, ಗಲ್ಲಿ ಗಲ್ಲಿಗಳನ್ನು ಅಲೆದು ಜೀವನ ಸಾಗಿಸುತ್ತಾರೆ. ಈ ಕುಟುಂಬದ ರೇಣುಕಾ ಹಾಗೂ ಹನಮ್ಮವ್ವ ತಳಕವಾರ ಎಂಬುವವರು ಭಕ್ತರು ನೀಡುವ ಆಹಾರ ಧಾನ್ಯ, ಚಿಲ್ಲರೆ ಕಾಸಿನಿಂದಲೇ ಕುಟುಂಬದ ಹೊಟ್ಟೆ ತುಂಬುವುದು.

ಢಮರು ಭಾರಿಸುತ್ತ, ದೇವಿಯ ಬಂದಾಳ ಎಂದು ಜಾನಪದ ಶೈಲಿಯಲ್ಲಿ ಹಾಡುತ್ತಾ ಸಾಗುತ್ತಾರೆ. ಮಕ್ಕಳು, ಮಹಿಳೆಯರು ಅಕ್ಕಿ, ಗೋಧಿ, ಇಲ್ಲವೇ ದುಡ್ಡು ನೀಡುತ್ತಾರೆ. ಅಲ್ಲಲ್ಲಿ ಗ್ರಾಮದ ದೇವರುಗಳ ಮುಂದೇ ಪೂಜೆ ಸಲ್ಲಿಸುತ್ತಾರೆ.

ಧಾನ ನೀಡಿದ ಭಕ್ತರಿಗೆ ನವಿಲು ಗರಿಯಿಂದ ಆಶೀರ್ವಾದ ಮಾಡಿ, ಕಳಿಸುತ್ತಾರೆ. ವಂಶ ಪಾರಂಪರ್ಯವಾಗಿ ಇದನ್ನೆ ನಂಬಿಕೊಂಡು‌ ಬಂದಿರುವ ಈ ಕುಟುಂಬದವರು ಮೂಲತಃ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ನಿವಾಸಿಯಾಗಿದ್ದಾರೆ. ಅಲೆಮಾರಿಯಂತೆ ಸಾಗುವ ಈ ಕುಟುಂಬದವರಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯ ಇಲ್ಲದೇ ಅಲೆಮಾರಿಗಳಾಗಿದ್ದಾರೆ.

ದುರ್ಗಾದೇವಿಯನ್ನು ಮನೆಯಲ್ಲಿ ಇರಿಸುವುದಿಲ್ಲ. ಹೀಗೆ ಹೊತ್ತುಕೊಂಡು ಜೀವನ ಸಾಗಿಸುವಂತೆ ಸೂಚನೆ ನೀಡುತ್ತಾಳೆ.

ABOUT THE AUTHOR

...view details