ಬಾಗಲಕೋಟೆ:ವಿಶ್ವ ದಾದಿಯರ ದಿನವಾದ ಇಂದು ಜಿಲ್ಲಾಸ್ಪತ್ರೆಯಲ್ಲಿ ಪ್ಲಾರೆನ್ಸ್ ನೈಟಿಂಗೆಲ್ ಅವರ ಭಾವಚಿತ್ರಕ್ಕೆ ಜಿಲ್ಲಾ ಸರ್ಜನ್ ಡಾ. ಪ್ರಕಾಶ ಬಿರಾದಾರ ಪೂಜೆ ಸಲ್ಲಿಸಿದ್ರು.
ಬಾಗಲಕೋಟೆಯಲ್ಲಿ ವಿಶ್ವ ದಾದಿಯರ ದಿನ ಆಚರಣೆ - ಪ್ಲಾರೆನ್ಸ್ ನೈಟಿಂಗೆಲ್ ಅವರ ಭಾವಚಿತ್ರ
ಬಾಗಲಕೋಟೆಯಲ್ಲಿ ವಿಶ್ವ ದಾದಿಯರ ದಿನವನ್ನು ಪ್ಲಾರೆನ್ಸ್ ನೈಟಿಂಗೆಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.

ವಿಶ್ವ ದಾದಿಯರ ದಿನ ಆಚರಣೆ
ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ ಆಗಿರುವ 45 ಶುಶ್ರೂಕಿಯರಿಗೆ ಪುಷ್ಪಾರ್ಚನೆಗೈದು ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಲಾಯಿತು. ಕಳೆದ ಎರಡು ತಿಂಗಳನಿಂದಲೂ ಕೊರೊನಾ ವಾರಿಯರ್ಸ್ ಆಗಿ ನರ್ಸ್ಗಳು ಕೆಲಸ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಮ್ಮ ಮನೆ, ಕುಟುಂಬ ಬಿಟ್ಟು ಶುಶ್ರೂಕಿಯರು ಯುದ್ಧ ಭೂಮಿಯಲ್ಲಿ ನಿಂತಂತೆ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಜೊತೆ ಹಗಲು ರಾತ್ರಿ ಹೋರಾಡುತ್ತಿದ್ದಾರೆ. ಹಾಗಾಗಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.