ಹೊಸಪೇಟೆ/ಬಾಗಲಕೋಟೆ: ಜಿಲ್ಲೆಯ 30 ಮಂದಿ ಕೂಲಿ ಕಾರ್ಮಿಕರು ಬೆಂಗಳೂರಿನಿಂದ ಬಾದಾಮಿಗೆ ಮಿನಿಗೂಡ್ಸ್ ವಾಹನದಲ್ಲಿ ಹೊರಟಿದ್ದಾರೆ.
ನಗರದಿಂದ ಹಳ್ಳಿಗೆ ಮರಳಿದ ವಲಸೆ ಕಾರ್ಮಿಕರ ದಂಡು - building workers
ಕಾರ್ಮಿಕರು ಬೆಂಗಳೂರಿನಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಕಟ್ಟಡ ಕೆಲಸಗಳನ್ನು ಬಂದ್ ಮಾಡುವಂತೆ ವಾರ್ನಿಂಗ್ ನೀಡಲಾಗಿದ್ದು, ಕಾರ್ಮಿಕರು ಮಿನಿಗೂಡ್ಸ್ ವಾಹನದಲ್ಲಿ ಬೆಂಗಳೂರಿನಿಂದ ಬಾದಾಮಿಗೆ ಹೊರಟಿದ್ದಾರೆ.
kooli
ನಗರದಲ್ಲಿ ಕಟ್ಟಡ ಕೆಲಸಗಳು ಸ್ಥಗಿತಗೊಂಡಿದ್ದು ಏಪ್ರಿಲ್ ತಿಂಗಳು ಮುಗಿಯುವತನಕ ಯಾರೂ ಕೆಲಸಕ್ಕೆ ಬರಬೇಡಿ ಎಂದು ಮಾಲೀಕರು ಕೂಲಿಯ ಹಣ ಕೊಟ್ಟು ಕಾರ್ಮಿಕರನ್ನು ಮನೆಗೆ ಕಳುಹಿಸಿದ್ದಾರೆ.
ನಾವು ವರ್ಷಪೂರ್ತಿ ಕೆಲಸ ಮಾಡಿ ಅದರಲ್ಲಿ ಬರುವ ಕೂಲಿ ಹಣದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಜೊತೆಜೊತೆಗೆ ಸಂಸಾರ ಸಾಗಿಸಬೇಕು. ಆದರೆ ಈ ತರಹದ ಕಾಯಿಲೆಗಳು ಬಂದರೆ ಹೇಗೆ ಜೀವನ ನಡೆಸುವುದು ಎಂದು ಬೇಸರ ವ್ಯಕ್ತಪಡಿಸಿದರು.