ಬಾಗಲಕೋಟೆ: ಗ್ರಾಮದಲ್ಲಿ ಮದ್ಯ ಸೇವನೆ ಮಾಡಿ, ಪುರುಷರಿಂದ ಗಲಾಟೆಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿ, ಹುನಗುಂದ ತಾಲೂಕಿನ ಕರಡಿ ಗ್ರಾಮದಲ್ಲಿನ ಎಂಎಸ್ಐಎಲ್ ಅನ್ನು ಮುಚ್ಚಿಸಲು ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ರೊಚ್ಚಿಗೆದ್ದ ಮಹಿಳೆಯರಿಂದ ಮದ್ಯದಂಗಡಿಗೆ ಮುತ್ತಿಗೆ ಹಾಕಿ ಪ್ರತಿಭಟನೆ - ಮದ್ಯ ಸೇವನೆಯಿಂದ ಅನೇಕ ಕುಟುಂಬಗಳು ತೊಂದರೆಗೆ ಸಿಲುಕಿವೆ
ಬಾಗಲಕೋಟೆಯ ಗ್ರಾಮವೊಂದರಲ್ಲಿ ರೊಚ್ಚಿಗೆದ್ದ ಮಹಿಳೆಯರು ಮದ್ಯದಂಗಡಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಬಂದ್ ಮಾಡಿಸಿರುವ ಘಟನೆ ಜರುಗಿದೆ.
ಮದ್ಯದಂಗಡಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಮದ್ಯ ಸೇವನೆಯಿಂದ ಅನೇಕ ಕುಟುಂಬಗಳು ತೊಂದರೆಗೆ ಸಿಲುಕಿವೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಹೀಗಾಗಿ 200ಕ್ಕೂ ಅಧಿಕ ಮಹಿಳೆಯರಿಂದ ಎಂಎಸ್ಐಎಲ್ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗಳ ವಿರುದ್ದ ಹರಿಹಾಯ್ದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರ ಸಂಖ್ಯೆ ಹೆಚ್ಚುತ್ತಿದ್ದಂತೆ ಅಂಗಡಿಗೆ ಬೀಗ ಹಾಕಿಕೊಂಡು ಸಿಬ್ಬಂದಿ ಹೊರಹೋದರು.ಗ್ರಾಮದಿಂದ ಮದ್ಯದಂಗಡಿ ಶಾಶ್ವತವಾಗಿ ತೆರವುಗೊಳಿಸಬೇಕು ಇಲ್ಲವೇ, ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಪ್ರತಿ ಭಟನಾಕಾರರು ಎಚ್ಚರಿಕೆ ನೀಡಿದರು.