ಬಾಗಲಕೋಟೆ: ಕಾಣೆಯಾದ ಮಹಿಳೆ ರುಂಡ, ಕೈ, ಕಾಲು ಕತ್ತರಿಸಿದ ಭೀಕರ ಸ್ಥಿತಿಯಲ್ಲಿ ಶವವಾಗಿ ಪತ್ತೆ ಆಗಿರುವ ಘಟನೆ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಬಳಿ ನಡೆದಿದೆ. ರುಂಡ, ಕೈ, ಕಾಲು ಕತ್ತರಿಸಿ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ರಮೀಜಾ ಅಲಾಸ (45) ಕೊಲೆಯಾದ ಮಹಿಳೆ. ಈಕೆ ರಬಕವಿ-ಬನಹಟ್ಟಿ ತಾಲೂಕಿನ ಹನಗಂಡಿ ಗ್ರಾಮದ ನಿವಾಸಿ. ಸದ್ಯ ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿ ಗ್ರಾಮದ ತೋಟದ ಮನೆಯೊಂದರಲ್ಲಿ ವಾಸವಿದ್ದರು.