ಬಾಗಲಕೋಟೆ:ಕತ್ತು ಬಿಗಿದು ಉಸಿರುಗಟ್ಟಿಸಿದ ರೀತಿ ಗೃಹಿಣಿಯೊಬ್ಬರು ಸಾವಿಗೀಡಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ತುಮ್ಮರಮಟ್ಟಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕತ್ತು ಬಿಗಿದು ಉಸಿರುಗಟ್ಟಿಸಿದ ರೀತಿ ಗೃಹಿಣಿ ಸಾವು... ಪತಿಯಿಂದಲೂ ಆತ್ಮಹತ್ಯೆ ಯತ್ನ - women death in bagalkot latest news
ಕತ್ತು ಬಿಗಿದು ಉಸಿರುಗಟ್ಟಿಸಿದ ರೀತಿ ಗೃಹಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ನಡೆದಿದೆ.
ಗೃಹಿಣಿ ಸಾವು
35 ವರ್ಷದ ಶಾರದಾ ತೆಗ್ಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ. ಆಕೆಯ ಗಂಡನೇ ಕತ್ತು ಹಿಸುಕಿ ಶಾರದಾಳನ್ನು ಕೊಲೆ ಮಾಡಿದ್ದಾರೆ ಎಂದು ಮೃತಳ ಸಂಬಂಧಿಕರು ಆರೋಪ ಮಾಡಿದ್ದಾರೆ. ಘಟನೆ ಬಳಿಕ ಮೃತಳ ಪತಿ ಹನುಮಂತ ತೆಗ್ಗಿ ಕೂಡ ಸೀಮೆಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಆತನನ್ನು ಬೀಳಗಿ ಸರಕಾರಿ ಆಸ್ಪತ್ರೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.