ಬಾಗಲಕೋಟೆ:ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮುಗಳೊಳ್ಳಿ ಗ್ರಾಮದಲ್ಲಿ ನಡೆದಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಗಂಡನ ಮನೆಯವರ ವಿರುದ್ಧ ಕೊಲೆ ಆರೋಪ - ಬಾಗಲಕೋಟೆಯಲ್ಲಿ ಗೃಹಿಣಿ ಆತ್ಮಹತ್ಯೆ
ಗೃಹಿಣಿಯೊಬ್ಬಳು ಊರಿನ ಹೊರವಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಗಳೊಳ್ಳಿ ಗ್ರಾಮದಲ್ಲಿ ನಡೆದಿದೆ.
ಗೃಹಿಣಿ ಶವ ಪತ್ತೆ
ಲಕ್ಷ್ಮಿಬಾಯಿ ಅಡವೆಪ್ಪ ಅಂಬಿಗೇರ (34) ಮೃತ ಮಹಿಳೆಯಾಗಿದ್ದಾರೆ. ಆಕೆಯನ್ನು ಕೊಲೆಗೈದು ಗ್ರಾಮದ ಹೊರ ವಲಯದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವಂತೆ ಸೃಷ್ಟಿ ಮಾಡಿದ್ದಾರೆ ಎಂದು ಕೊಲೆಯಾಗಿರುವ ಮಹಿಳೆಯರ ಪಾಲಕರು ಆರೋಪಿಸಿದ್ದಾರೆ.
ಈಕೆಗೆ ಮದುವೆ ಆಗಿ ಏಳು ವರ್ಷವಾಗಿದ್ದು, ಒಂದು ಮಗು ಇದೆ. ಗಂಡ ಹಾಗೂ ಅತ್ತೆ,ಮಾವ ಸೇರಿ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ಪೋಷಕರು ಗಂಡನ ಮನೆಯ ನ್ವಾಲರ ಮೇಲೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ತನಿಖೆ ಪ್ರಗತಿಯಲ್ಲಿದೆ.