ಬಾಗಲಕೋಟೆ: ಸಾವಳಗಿ ಗ್ರಾಮದ ಮಹಿಳೆಯೊಬ್ಬರು ಜಮಖಂಡಿ ನಗರದ ಮಾಳಗಿ ನರ್ಸಿಂಗ್ ಹೋಮ್ನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ - gave birth to three childrens
ಬಾಗಲಕೋಟೆಯ ಸಾವಳಗಿ ಗ್ರಾಮದ ರೇವತಿ ಪರಶುರಾಮ ಮೈಗೂರ ಎನ್ನುವವರು ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ತ್ರಿವಳಿ ಮಕ್ಕಳಿಗೆ ಜನ್ಮ
ಸಾವಳಗಿ ಗ್ರಾಮದ ನಿವಾಸಿ ರೇವತಿ ಪರಶುರಾಮ ಮೈಗೂರ ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಮೂರು ಮಕ್ಕಳು 1.8 ಕೆ.ಜಿ ತೂಕವಿದ್ದು ಸಶಕ್ತರಾಗಿದ್ದಾರೆ ಎಂದು ಡಾ.ನಯನಾ ಮಾಳಗಿ ತಿಳಿಸಿದ್ದಾರೆ.
ಸ್ತ್ರೀ ರೋಗ ತಜ್ಞರಾದ ಡಾ.ನಯನಾ ಮಾಳಗಿ, ಅರವಳಿಕೆ ತಜ್ಞ ಡಾ.ಮನೋಹರ್, ಬಸಯ್ಯ ಮಠ ಹಾಗೂ ಮಾಳಗಿ ಆಸ್ಪತ್ರೆಯ ಸಿಬ್ಬಂದಿ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.