ಬಾಗಲಕೋಟೆ :ಹೆಂಡತಿ ಪ್ರಿಯಕರನ ಜೊತೆ ಸೇರಿಕೊಂಡು ಗಂಡನನ್ನೇ ಕೊಲೆ ಮಾಡಿದ ಪ್ರಕರಣ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಪ್ರವೀಣ ಸೇಬಣ್ಣವರ(30) ಮೃತ ಪಟ್ಟ ವ್ಯಕ್ತಿ. ಪತ್ನಿ ನಿತ್ಯಾ ಮತ್ತು ಪ್ರಿಯಕರ ರಾಘವೇಂದ್ರ ಸೇರಿ ಕಾರಿನಲ್ಲಿ ಗುದ್ದಿ ಪ್ರವೀಣನನ್ನು ಕೊಲೆ ಮಾಡಿರುವುದು ಸಾಭೀತಾಗಿದೆ. ನಿತ್ಯಾಳನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮದ ಸಂಬಂಧ ಹಿನ್ನೆಲೆ ಲವರ್ ಜೊತೆ ಸೇರಿ ಗಂಡನಿಗೆ ಕಾರು ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದಾರೆ. ಕಾರಿನಲ್ಲಿ ಬಂದ ಪತ್ನಿ ಹಾಗೂ ಲವರ್ ಪತಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದರು. ಪ್ರವೀಣ ಪತ್ನಿಗೆ ಕರೆ ಮಾಡಿ ಅಪಘಾತ ಆಗಿರುವುದನ್ನು ಹೇಳಿದಾಗ ಸತ್ತಿಲ್ಲ ಎಂಬುದನ್ನು ತಿಳಿದು ಮತ್ತೆ ಬಂದು ಪತಿಯ ಮೇಲೆ ಕಾರು ಹತ್ತಿಸಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಹುನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿ ಜುಲೈ 2 ರಂದು ಮಧ್ಯರಾತ್ರಿ 12 ವರೆ ಸುಮಾರಿಗೆ ಈ ಘಟನೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ರೀತಿಯಲ್ಲಿ ಶವ ಪತ್ತೆಯಾಗಿತ್ತು. ಬೈಕ್ ಬಿದ್ದ ಜಾಗ ಶವದ ಮೇಲಿನ ಗಾಯ ಕೊಲೆ ಶಂಕೆ ಮೂಡಿಸಿದ ಕಾರಣ ಅಮೀನಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪತ್ನಿ ಮೇಲೆ ಸಂಶಯದಿಂದ ಪೋನ್ ಕಾಲ್ ಚೆಕ್ ಮಾಡಿದಾಗ ಹಾಗೂ ಅನುಮಾನಗಳು ಬಂದು ವಿಚಾರಿಸಿದಾಗ ಸತ್ಯ ಹೊರ ಬಂದಿದೆ.
ಪ್ರೀತಿಸಿ ಮದುವೆ ಹಲವು ವರ್ಷಗಳ ಗತಿಸಿದೆ. ಇಬ್ಬರು ಮಕ್ಕಳು ಸಹ ಇದ್ದಾರೆ. ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಗ್ಯಾರೇಜ್ ಇಟ್ಟಕೊಂಡಿದ್ದ ರಾಘವೇಂದ್ರ ಎಂಬುವವ ಪರಿಚಯ ವಾಗಿ ಪ್ರೀತಿಗೆ ತಿರುಗಿದೆ. ಈ ವಿಷಯ ಗಂಡನಿಗೆ ತಿಳಿದು ನಿತ್ಯ ಕಿರಿಕಿರಿ ಪ್ರಾರಂಭವಾಗಿದೆ. ಇದನ್ನು ನಿತ್ಯಾ ತನ್ನ ಲವರ್ ತಿಳಿಸಿ ಕೊಲೆ ಮಾಡುವ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ :ನೂಪುರ್ ಶರ್ಮಾ ವಿಡಿಯೋ ನೋಡುತ್ತಿದ್ದಾಗ ಯುವಕನ ಮೇಲೆ ಚಾಕುವಿನಿಂದ ಹಲ್ಲೆ.. ಆಸ್ಪತ್ರೆಗೆ ದಾಖಲು