ಕರ್ನಾಟಕ

karnataka

ETV Bharat / state

ಸಮಯ ಬಂದಾಗ ಗೋಕಾಕ್​​ಗೆ ಹೋಗಿ ಅಲ್ಲೇ ಉತ್ತರ ಕೊಟ್ಟು ಬರುತ್ತೇನೆ: ಜಾರಕಿಹೊಳಿಗೆ ಕಾಶಪ್ಪನವರ ತಿರುಗೇಟು - ETV Bharat kannada News

ರಮೇಶ ಜಾರಕಿಹೊಳಿ ಹೇಳಿಕೆಗೆ ಮಾಜಿ ಶಾಸಕ ಕಾಶಪ್ಪನವರ್ ಟಾಂಗ್​ ಕೊಟ್ಟಿದ್ದಾರೆ.​

Former Minister Ramesh Jarakiholi
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್

By

Published : Mar 17, 2023, 6:45 PM IST

ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಕಾಶಪ್ಪನವರ ತಿರುಗೇಟು

ಬಾಗಲಕೋಟೆ:ಇತ್ತಿಚೆಗೆ ಬಿಜೆಪಿ ಪಕ್ಷದ ವಿಜಯ ಸಂಕಲ್ಪಯಾತ್ರೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಇಲಕಲ್ಲ ಪಟ್ಟಣದಲ್ಲಿ ಹುನಗುಂದ ಮತಕ್ಷೇತ್ರದ ಕಾಂಗ್ರೆಸ್​ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಹರಿಹಾಯ್ದು ಭಾಷಣ ಮಾಡಿದ್ದರು. ಇದಕ್ಕೆ ಕಾಶಪ್ಪನವರ್ ತಿರುಗೇಟು ನೀಡಿದ್ದು, ಗೋಕಾಕಕ್ಕೆ ಹೋಗಿ ಖಂಡಿತವಾಗಿಯೂ ಉತ್ತರ ಕೊಟ್ಟು ಬರುತ್ತೇನೆ ಎಂದು ಸವಾಲ್​ ಕೂಡಾ ಹಾಕಿದ್ದಾರೆ.

ಇಲಕಲ್ಲ ಪಟ್ಟಣದ ತಮ್ಮ ಸ್ವಗ್ರಹದಲ್ಲಿ ಮಾತನಾಡಿದ ಕಾಶಪ್ಪನವರ್​, ನಾನು ನನ್ನ ಸಮಾಜದ ಮೀಸಲಾತಿ ಸಮಾವೇಶದ ಸಲುವಾಗಿ ಗೋಕಾಕ್​​ ಕ್ಷೇತ್ರಕ್ಕೆ ಹೋಗಿದ್ದೆ, ಅಲ್ಲಿ ಏನ್ ಮಾತಾಡಿದ್ದೇನೆ ಎನ್ನುವುದು ಜನರಿಗೆ ಗೊತ್ತಿದೆ. ಅವರು ನನ್ನ ಮತಕ್ಷೇತ್ರಕ್ಕೆ ಬಂದು ಇಲ್ಲಿ ನನ್ನ ಬಗ್ಗೆ ಆರೋಪ ಮಾಡುತ್ತಾರಲ್ಲ. ಮೊದಲು ಅವರ ಮತಕ್ಷೇತ್ರ ಗೋಕಾಕ್​​ನಲ್ಲಿ ಮತ ಹಾಕಿಸಿಕೊಳ್ಳಲಿ ನೋಡೋಣ. ಅಲ್ಲಿ ನನ್ನ ಸಮಾಜ ಇದ್ದು ಸಂದರ್ಭ ಬಂದಾಗ ಅಲ್ಲೇ ಹೋಗಿ ಉತ್ತರ ಕೊಡುತ್ತೇನೆ ಎಂದು ರಮೇಶ್​ ಜಾರಕಿಹೊಳಿ ವಿರುದ್ದ ಕಿಡಿಕಾರಿದರು.

ಮತ ಹಾಕಬೇಡಿ ಎನ್ನುವ ವಿಚಾರಕ್ಕೆ ಕಾಶಪ್ಪನವರ್​ ಟಾಂಗ್​ :ಇನ್ನು ’’ಹುನಗುಂದ ಮತಕ್ಷೇತ್ರದಲ್ಲಿ ಇರುವ ಎಸ್ಟಿ, ಎಸ್ಸಿ ಹಾಗೂ ಹಿಂದುಳಿದ ವರ್ಗದವರು ಮಾಜಿ ಶಾಸಕರಿಗೆ ಮತ ಹಾಕಬೇಡಿ ಎಂಬ ರಮೇಶ್​ ಜಾರಕಿಹೊಳಿ ಹೇಳಿಕೆ ಪ್ರತಿಕ್ರಿಯಿಸಿದ ಅವರು, ನನ್ನ ಕ್ಷೇತ್ರಕ್ಕೆ ಬರಲಿ, ನಾನು ಸವಾಲು ಹಾಕುತ್ತೇನೆ. ನನ್ನ ಮತಕ್ಷೇತ್ರದ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದವರು ಸೇರಿ ಕಳೆದ ಐವತ್ತು ವರ್ಷದಿಂದ ನಮ್ಮ ತಂದೆ ಕಾಲದಿಂದ ರಾಜಕೀಯ ಮಾಡಿದ್ದೇವೆ. ಈ ಮತ ಕ್ಷೇತ್ರದಲ್ಲಿ ಈ ಹಿಂದೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಇದ್ದಾಗ, ಸರ್ಕಾರದಲ್ಲಿ ಎಷ್ಟು ಭವನಗಳನ್ನು ಕೊಟ್ಟಿದ್ದೇವೆ. ಗಂಗಾ ಕಲ್ಯಾಣ ಯೋಜನೆಯೊಳಗೆ ಏನೆಲ್ಲಾ ಮಾಡಿದ್ದೇವೆ. ರಮೇಶ ಜಾರಕಿಹೊಳಿ ಬಂದು ನೋಡಲಿ. ಅವರನ್ನು ಜನ ಒಪ್ಪಿದರೆ ಬಂದು ಮಾಡಲಿ. ಇವರಾರು ಜನರಿಗೆ ಹೇಳೋಕೆ, ಇವನೇನು ದೊಡ್ಡ ನಾಯಕಾನಾ‘‘ ಎಂದುಕಾಶಪ್ಪನವರ ಏಕ ವಚನದಲ್ಲಿಯೇ ಟಾಂಗ್ ಕೊಟ್ಟರು.

ಇದೇ ಸಮಯದಲ್ಲಿ ರಮೇಶ್​ ಜಾರಕಿಹೊಳಿ ವಿರುದ್ದ ವಾಗ್ದಾಳಿ ಮುಂದುವರಿಸಿದ ಕಾಶಪ್ಪನವರ್​ ’’ಇವರೇನು ಸರ್ವಾಧಿಕಾರಿ ಹೊಂದಿದವನಾ? ಯಾವುದಾದರೂ ದೇಶದ ರಾಜಾನಾ? ಇದು ಪ್ರಜಾಪ್ರಭುತ್ವ ರಾಷ್ಟ್ರ ಆದ್ದರಿಂದ ಪ್ರಜೆಗಳು ತೀರ್ಮಾನ ಮಾಡಬೇಕು. ಇವನು ಹೇಳಿದ ಕೂಡಲೇ ಜನರು ತೀರ್ಮಾನ ಮಾಡಿ ಬಿಡ್ತಾರಾ? ಎಂದು ತಿರುಗೇಟು ನೀಡಿದರು‘‘.

’’ನಿಮ್ಮ ಮತಕ್ಷೇತ್ರ ನೋಡಿಕೊಳ್ಳಿ ಮೊದಲು, ತನ್ನ ತಟ್ಟೆಯಲ್ಲಿ ಕೋಣ ಬಿದ್ದಿದೆ. ಮಂದಿ ತಟ್ಟೆಯಲ್ಲಿ ನೊಣ‌ ತೆಗೆಯೋಕೆ ಹೋಗುತ್ತಿದ್ದಾನೆ. ಈ ಪುಣ್ಯಾತ್ಮ ಏನು ಮಾಡಿದ್ದಾನೆ ಎಂಬುದು ಇಡೀ ರಾಜ್ಯಕ್ಕ ಗೊತ್ತಿದೆ ಎಂದು ಕಿಡಿ ಕಾರಿದರು. ಯಾವುದಾಕ್ಕಾಗಿ ಮಂತ್ರಿಗಿರಿ ಕಳಕೊಂಡ? ಏನ್ ಜನರಿಗೋಸ್ಕರ ರಾಜೀನಾಮೆ ಕೊಟ್ಟನಾ? ಏನ್ ದೊಡ್ಡ ಕೆಲಸ ಮಾಡಿದ್ದಾನಾ ಎಂದು ಪ್ರಶ್ನೆ ಮಾಡಿದರು. ಅಷ್ಟೇ ಅಲ್ಲ ನನ್ನ ಕ್ಷೇತ್ರದ ಜನ ನನ್ನ ಚುನಾವಣೆ ಗೆಲುವಿನ ಬಗ್ಗೆ ತೀರ್ಮಾನ ಮಾಡುತ್ತಾರೆ. ಸೇಡಿನಿಂದ ಮಾತನಾಡುವುದು ನನಗೂ ಬರುತ್ತೆ. ಆದರೇ ನಾನು ಮಾತನಾಡುವುದಿಲ್ಲ. ಎಲ್ಲಾ ಜನ ತೀರ್ಮಾನ ಮಾಡುತ್ತಾರೆ. ಸಮಯ ಬಂದಾಗ ಗೋಕಾಕ್​ಗೆ ಹೋಗಿ ಅಲ್ಲೇ ಉತ್ತರ ಕೊಟ್ಟು ಬರುತ್ತೇನೆ‘‘ ಎಂದು ಕಾಶಪ್ಪನವರ ಹೇಳಿದರು.

ಇದನ್ನೂ ಓದಿ :ಈ ಬಾರಿ ವಿಜಯಾನಂದ ಕಾಶಪ್ಪನವರನ್ನು ​ಮನೆಗೆ ಕಳುಹಿಸಬೇಕು: ರಮೇಶ್​ ಜಾರಕಿಹೊಳಿ

ABOUT THE AUTHOR

...view details