ಕರ್ನಾಟಕ

karnataka

ETV Bharat / state

ಬಿಜೆಪಿ ಸರ್ಕಾರ ತಾನಾಗಿಯೇ ಬಿದ್ದರೆ ಏನೂ ಮಾಡಲು ಆಗುವುದಿಲ್ಲ: ಸಿದ್ದರಾಮಯ್ಯ - DCM Govinda Karajola

ಬಿಜೆಪಿಯಲ್ಲಿ ಭಿನ್ನಮತವಿದೆ. ಅದು ಅವರ ಆಂತರಿಕ ವಿಚಾರ. ಸರ್ಕಾರ ತಾನಾಗಿಯೇ ಬಿದ್ದರೆ ಏನೂ ಮಾಡಲಾಗುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದಲ್ಲದೆ ಮೇಲ್ಸೇತುವೆಗೆ ಸಾವರ್ಕರ್​ ಬದಲು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಕನ್ನಡ ಸಾಹಿತಿಗಳ ಹೆಸರು ಇಡಬಹುದು ಎಂದಿದ್ದಾರೆ.

we are not responsible if the government collapses there is dissidness in BJP: siddaramaiah
ಬಿಜೆಪಿಯಲ್ಲಿ ಭಿನ್ನಮತವಿರುವುದು ನಿಜ, ಸರ್ಕಾರ ತಾನಾಗಿಯೇ ಬಿದ್ದರೆ ಏನೂ ಮಾಡಲು ಆಗುವುದಿಲ್ಲ: ಸಿದ್ದರಾಮಯ್ಯ

By

Published : Jun 3, 2020, 8:53 PM IST

ಬಾಗಲಕೋಟೆ:ಬಿಜೆಪಿ ಪಕ್ಷದಲ್ಲಿ ಭಿನ್ನಮತ ಇರುವುದು ನಿಜ. ಅದು ಆ ಪಕ್ಷದ ಆತಂರಿಕ ವಿಷಯ. ಆದರೆ ಸರ್ಕಾರ ಬೀಳಿಸುವುದಕ್ಕೆ ಕೈ ಹಾಕಲ್ಲ. ಅದು ತಾನಾಗೇ ಬಿದ್ದರೆ ಏನೂ ಮಾಡಲಿಕ್ಕೆ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

ಬಾದಾಮಿ ಮತಕ್ಷೇತ್ರದಲ್ಲಿ ಪ್ರವಾಸ ಹಮ್ಮಿಕೊಂಡಿದ್ದ ಸಿದ್ದರಾಮಯ್ಯ ಮಧ್ಯಾಹ್ನ ಆಗಮಿಸಿ, ಕೋವಿಡ್​ ಹಿನ್ನೆಲೆ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸೂಕ್ತ ಕ್ರಮ ತೆಗೆದುಕೊಂಡಿರುವ ಬಗ್ಗೆ ಸಮಗ್ರ ಚರ್ಚೆ ನಡೆಸಿದರು.

ಸರ್ಕಾರ ತಾನಾಗಿಯೇ ಬಿದ್ದರೆ ಏನೂ ಮಾಡಲು ಆಗುವುದಿಲ್ಲ: ಸಿದ್ದರಾಮಯ್ಯ

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಕೆಲ ನಾಯಕರು ಅಭಿಪ್ರಾಯ ಹಂಚಿಕೊಂಡಿದ್ದು, ಯಡಿಯೂರಪ್ಪನವರ ಜೊತೆಗೆ ಮಾತನಾಡುವ ಬದಲು ವಿಜಯೇಂದ್ರ ಜೊತೆ ಮಾತನಾಡಬೇಕು. ಸಿಎಂ ಹೆಚ್ಚು ಅನುದಾನ ನೀಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾವರ್ಕರ್​ ಹೆಸರು ವಿವಾದದ ಬಗ್ಗೆ ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಸಾಹಿತಿಗಳ ಹೆಸರು ಇಲ್ಲವೇ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕ್ಷೇತ್ರದಲ್ಲಿ ಆಗಮಿಸಿ, ಸಿಡಿಲು ಬಡಿದು ಮೃತಪಟ್ಟಿರುವ ಕುಟುಂಬದವರಿಗೆ ಚೆಕ್ ವಿತರಣೆ ಮಾಡಿದ ಬಗ್ಗೆ ‌ಪ್ರತಿಕ್ರಿಯೆ ನೀಡಿ, ಕಾರಜೋಳ ಅವರು ನನಗೆ ಕರೆ ಮಾಡಿ‌ ಕೇಳಿದರು. ನೀವು ಬರಬೇಕು ಎಂದು ತಿಳಿಸಿದ್ದರು. ಆದರೆ ನನಗೆ ಬರಲಿಕ್ಕೆ ಆಗುವುದಿಲ್ಲ. ನೀವೇ ಹೋಗಿ ಚೆಕ್‌ ವಿತರಣೆ ಮಾಡಿ ಬನ್ನಿ ಅಂತ ಹೇಳಿದ್ದೆ. ಇದರಿಂದ ಶಿಷ್ಟಾಚಾರ ಉಲ್ಲಂಘನೆ ಹೇಗೆ ಆಗುತ್ತೆ? ಅವರು ನನಗೆ ಮಾಹಿತಿ‌ ನೀಡಿದ್ದಾರೆ ಎಂದು ತಿಳಿಸಿದರು.

ಬಳಿಕ ಬಾದಾಮಿ ಪಟ್ಟಣದಲ್ಲಿ ಕೊರೊನಾ ಹತೋಟಿಗೆ ಶ್ರಮಿಸಿದ ಆರೋಗ್ಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರ ಸನ್ಮಾನ ಸಮಾರಂಭದಲ್ಲಿ ಭಾಗಿಯಾಗಿ ಎಲ್ಲರನ್ನೂ ಅಭಿನಂದಿಸಿದರು.

ABOUT THE AUTHOR

...view details