ಬಾಗಲಕೋಟೆ : ಕಳೆದ ನಾಲ್ಕು ತಿಂಗಳಿಂದ ನೀರಿನ ಬವಣೆಯಿಂದ ಸಂಪೂರ್ಣ ತತ್ತರಿಸಿ ಹೋಗಿದ್ದ ರಬಕವಿ-ಬನಹಟ್ಟಿ ತಾಲೂಕಿನ ಜನತೆಗೆ ಹರ್ಷ ಉಂಟಾಗಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಮಹಾರಾಷ್ಟ್ರದ ಕೊಯನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಬಾಗಲಕೋಟೆ ಜಿಲ್ಲೆಗೆ ನೀರು ಪ್ರವೇಶ ಮಾಡಿದೆ.
ಕೊಯನಾ ಡ್ಯಾಂನಿಂದ ಕೃಷ್ಣೆಗೆ ಹರಿದು ಬಂತು ನೀರು... ರೈತ ಮೊಗದಲ್ಲಿ ಮಂದಹಾಸ - Water
ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಹರಿಸಲಾಗಿದ್ದು, ಬಾಗಲಕೋಟೆಯ ತೇರದಾಳ ವಿಧಾನಸಭಾ ಕ್ಷೇತ್ರದ ರಬಕವಿ-ಬನಹಟ್ಟಿ, ತೇರದಾಳ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಹಾಗೂ ನೇಕಾರರ ಮೊಗದಲ್ಲಿ ಮಂದಹಾಸ ಮೂಡಿದೆ.
ಅಂತೂ ಕೃಷ್ಣೆಗೆ ಬಂತು ನೀರು
ತೇರದಾಳ ವಿಧಾನಸಭಾ ಕ್ಷೇತ್ರದ ರಬಕವಿ-ಬನಹಟ್ಟಿ, ತೇರದಾಳ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಹಾಗೂ ನೇಕಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಮಂಗಳವಾರ ಸಂಜೆ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಹರಿಸಲಾಗಿದ್ದು, ನೀರು ತಮದಡ್ಡಿ ಗ್ರಾಮವನ್ನು ಪ್ರವೇಶಿಸಿದೆ.
ಮಂಗಳವಾರ ಸಂಜೆ ತೇರದಾಳ ಶಾಸಕ ಸಿದ್ದು ಸವದಿ ನದಿ ದಡಕ್ಕೆ ಭೇಟಿ ನೀಡಿ ಮಾತನಾಡಿದರು. ನೀರಿನ ವೇಗ ಹೆಚ್ಚಾಗಿದ್ದು, ಬುಧವಾರ ರಾತ್ರಿ ಹೊತ್ತಿಗೆ ಹಿಪ್ಪರಗಿ ಜಲಾಶಯದ ಮೂಲಕ ನೀರು ಬರಲಿದೆ. ಇದರಿಂದ ನೀರಿನ ಬವಣೆ ಕಡಿಮೆ ಆಗಲಿದೆ ಎಂದು ತಿಳಿಸಿದರು.