ಕರ್ನಾಟಕ

karnataka

ETV Bharat / state

ತೇರದಾಳ ಶಾಸಕ ಸಿದ್ದು ಸವದಿಯಿಂದ ರೂಲ್ಸ್​ ಬ್ರೇಕ್​!? - ತೇರದಾಳ ಶಾಸಕ ಸಿದ್ದು ಸವದಿಯಿಂದ ಕಾನೂನು ಉಲ್ಲಂಘನೆ!!

ದೇಶದಲ್ಲಿ ಮೋಟಾರ್ ವಾಹನ ಕಾಯ್ದೆ ಜಾರಿಯಾಗಿ ಸಾಕಷ್ಟು ದಿನಗಳು ಕಳೆದವು. ಆದರೆ ಶಾಸಕ ಸಿದ್ದು ಸವದಿಗೆ ಈ ಕಾನೂನು ಅನ್ವಯವಾದಂತೆ ಕಾಣುತ್ತಿಲ್ಲ.

ddd
ತೇರದಾಳ ಶಾಸಕ ಸಿದ್ದು ಸವದಿಯಿಂದ ರೂಲ್ಸ್​ ಬ್ರೇಕ್​!?

By

Published : Dec 24, 2019, 6:14 PM IST

ಬಾಗಲಕೋಟೆ: ಮೋಟಾರ್ ವಾಹನ ಕಾಯ್ದೆ ಪ್ರಕಾರ ವಾಹನಗಳ‌ ನಂಬರ್​ ಪ್ಲೇಟ್​ ಮೇಲೆ ಯಾವುದೇ ಅಕ್ಷರಗಳನ್ನು ಬರೆಯುವಂತಿಲ್ಲ.ಆದರೆ ಈ ಕಾನೂನು ಜಿಲ್ಲೆಯ ತೇರದಾಳ ಮತಕ್ಷೇತ್ರ ಶಾಸಕರಾದ ಸಿದ್ದು ಸವದಿಯವರಿಗೆ ಅನ್ವಯವಾಗುತ್ತದೆಯೋ ಇಲ್ಲವೋ ಎಂಬ ಚರ್ಚೆ ಆರಂಭವಾಗಿದೆ.

ತೇರದಾಳ ಶಾಸಕ ಸಿದ್ದು ಸವದಿಯಿಂದ ರೂಲ್ಸ್​ ಬ್ರೇಕ್​!?

ಕಾರಣ ಶಾಸಕ ಸಿದ್ದು ಸವದಿ ತಮ್ಮ ವಾಹನದ ನಂಬರ್​ ಪ್ಲೇಟ್​ ಮೇಲೆ ವಿಧಾನ ಸಭೆಯ ಸದಸ್ಯರು ಹಾಗೂ ಶಾಸಕರು ಎಂದು ಬರೆಸಿಕೊಂಡಿದ್ದಾರೆ. ಇನ್ನು ಎಲ್ಲೆಡೆ ಈ ರೀತಿಯಾಗಿ ಕಾನೂನು ಮಿರಿದ್ರೆ ಅಂತವರಿಗೆ ದಂಡ ಹಾಕಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆದರೆ ಶಾಸಕರು ‌ಈ ರೀತಿಯಲ್ಲಿ ಹಾಕುವುದು ಸರಿಯೇ ಅಥವಾ ಶಾಸಕರಿಗೆ ಮೋಟಾರು ಕಾಯ್ದೆಯಲ್ಲಿ ಹೆಸರು ಹಾಕಲು ಅವಕಾಶವಿದೆಯೇ ಎಂಬುದನ್ನು ಶಾಸಕರು ಸ್ಪಷ್ಟ ಪಡಿಸಬೇಕಾಗಿದೆ.

ಇನ್ನು ದೇಶದಲ್ಲಿ ಎಲ್ಲರಿಗೂ ಒಂದೆ ಕಾನೂನು.ಆದರೆ ಶಾಸಕರು ಈ ರೀತಿ ನಡೆದುಕೊಳ್ಳುತ್ತಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ABOUT THE AUTHOR

...view details