ಬಾಗಲಕೋಟೆ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಆರೋಪಿ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನಿನ ಮೇಲೆ ಶನಿವಾರ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದ ಬಳಿಕ ಇಲಕಲ್ಲ ಪಟ್ಟಣಕ್ಕೆ ಭೇಟಿ ನೀಡಿದ್ದರು.
ಇಲಕಲ್ಲನಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರಿಗೆ ವಿನಯ್ ಕುಲಕರ್ಣಿ ಆತ್ಮೀಯ ಗೆಳೆಯರಾದ ಹಿನ್ನೆಲೆ ಕುಶಲೋಪರಿ ವಿಚಾರಿಸಿ, ಕೆಲ ವಿಚಾರಗಳ ಕುರಿತು ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.
ವಿನಯ್ ಕುಲಕರ್ಣಿ ಮತ್ತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿನಯ್ ಕುಲಕರ್ಣಿಯನ್ನ ಆತ್ಮೀಯವಾಗಿ ಬರಮಾಡಿಕೊಂಡ ವಿಜಯಾನಂದ ಕಾಶಪ್ಪನವರ ಧೈರ್ಯ ತುಂಬಿದರು. ಈ ವೇಳೆ ವಿನಯ್ ಕುಲಕರ್ಣಿ ಅಭಿಮಾನಿಗಳು ಸಹ ಹಾಜರಾಗಿದ್ದು, ಸೆಲ್ಫಿಗೆ ಮುಗಿಬಿದ್ದ ದೃಶ್ಯಗಳು ಕಂಡುಬಂದವು.
ಉಭಯ ಮುಖಂಡರು ಪಂಚಮಸಾಲಿ ಸಮಾಜ ಸಂಘಟನೆ ಕುರಿತು ಹಾಗೂ ಮುಂದಿನ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ. ವಿನಯ್ ಕಲಕುರ್ಣಿ ಹಿಂದೆ ಸಚಿವರಾಗಿದ್ದ ಸಮಯದಲ್ಲಿ ಹುನಗುಂದ ಮತಕ್ಷೇತ್ರದ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಜಯಾನಂದ ಕಾಶಪ್ಪನವರಿಗೆ ಸಾಥ್ ನೀಡಿದ್ದರು.