ಬಾಗಲಕೋಟೆ:ಹುನಗುಂದ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ ಆಕ್ಸಿಜನ್ ನೀಡಿರುವುದು ದೊಡ್ಡಸ್ತಿಕೆ ಅಲ್ಲ. ಕೊರೊನಾದಿಂದ ಮೃತಪಡುತ್ತಿರುವವರ ಜೀವ ಉಳಿಸುವ ಅಗತ್ಯವಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ತಿರುಗೇಟು ನೀಡಿದ್ದಾರೆ.
ಇಳಕಲ್ಲ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಸಿಗದ ಆಕ್ಸಿಜನ್ಅನ್ನು ಶಾಸಕರು ಎಲ್ಲಿಂದ ತಂದಿದ್ದಾರೆಂಬುದು ಮೊದಲು ತನಿಖೆ ಆಗಬೇಕು. ಆಕ್ಸಿಜನ್ಗಿಂತ ಮೊದಲು ಬೆಡ್ ವ್ಯವಸ್ಥೆ, ವೆಂಟಿಲೇಟರ್ ವ್ಯವಸ್ಥೆ, ಲಸಿಕೆ ವ್ಯವಸ್ಥೆ ಮಾಡಲಿ. ಆಗ ಮಾತ್ರ ಸಾಯುವವರನ್ನು ಬದುಕಿಸಿದಂತಾಗುತ್ತದೆ. ಆಕ್ಸಿಜನ್ ಇಲ್ಲದೇ ಜೀವ ಹೋದ ಬಳಿಕ ತೆಗೆದುಕೊಂಡು ಏನು ಮಾಡುವುದು ಎಂದು ಆಕ್ರೋಶ ಹೂರ ಹಾಕಿದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಮೊದಲು ಕೋವಿಡ್ ಆಸ್ಪತ್ರೆ ತೆರೆಯಲಿ. ಇಲ್ಲಿನ ವೈದ್ಯರು, ಶಾಸಕರು ಸೇರಿ ರೋಗಿಗಳ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಕೋವಿಡ್ ಆಗಿರುವುದಕ್ಕೆ ಮನೆಗೆ ಬೀಗ ಹಾಕಿ ಕುಳಿತುಕೊಳ್ಳುವುದು ಅಲ್ಲ. ಸಾರ್ವಜನಿಕ ವಲಯದಲ್ಲಿ ಇರುವ ಜನಪ್ರತಿನಿಧಿಗಳು, ಜನರ ಕಷ್ಟ, ದುಃಖಗಳಿಗೆ ಸ್ಪಂದಿಸಬೇಕು ಎಂದರು.
ಇದನ್ನೂ ಓದಿ:ಕೋವಿಡ್ ಹೆಚ್ಚಳ: ಶಾಸಕ ದೊಡ್ಡಗೌಡ ಪಾಟೀಲರಿಂದ ಆಕ್ಸಿಜನ್ ಘಟಕಕ್ಕೆ ಪುನಶ್ಚೇತನ
ಜಿಲ್ಲಾಡಳಿತವೇ ಭ್ರಷ್ಟಾಚಾರದಿಂದ ಕೂಡಿದ್ದು, ಕೊರೊನಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ಇದೇ ಸಮಯದಲ್ಲಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ ಅವರ ಬೆಂಬಲಿಗರು, ವಿನಾ ಕಾರಣ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಸುಮ್ಮನೆ ಇದ್ದು, ಕೆಲಸ ಮಾಡದೆ ಇದ್ದಲ್ಲಿ ಬಹಿರಂಗವಾಗಿ ಅವರಿಗೆ ಉತ್ತರ ನೀಡಬೇಕಾಗುತ್ತದೆ ಎಂದು ಆವಾಜ್ ಹಾಕಿದರು.