ಬಾಗಲಕೋಟೆ :ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 75 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಮೆರವಣಿಗೆ ಮತ್ತು ಕೂಡಲಸಂಗಮದಿಂದ ಹುನಗುಂದವರಗೆ ಸುಮಾರು 20 ಕೀಲೋ ಮೀಟರ್ ದೂರದಷ್ಟು ಪಾದಯಾತ್ರೆಯನ್ನು ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಿಜಯಾನಂದ ಕಾಶಪ್ಪನವರ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಪಾದಯಾತ್ರೆಯಲ್ಲಿ 75 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಮೆರವಣಿಗೆ ಮಾಡಿದ್ದೇವೆ. ಅದರಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರವೂ ಇದೆ. ಶಿವಾಜಿ ಮಹಾರಾಜರು, ಝಾನ್ಸಿ ಲಕ್ಷ್ಮೀಭಾಯಿ, ಸುಭಾಸ್ ಚಂದ್ರ ಬೋಸ್ ಇದ್ದಾರೆ. ಅವರೆಲ್ಲ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೀವ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.
ಹುನಗುಂದಕ್ಕೆ ಬಂದು ವಿಜಯೇಂದ್ರ ಗೆದ್ದು ತೋರಿಸಲಿ: ಕಾಶಪ್ಪನವರ ಓಪನ್ ಚಾಲೆಂಜ್ ಪದೇ ಪದೇ ಹುನಗುಂದ ಮತಕ್ಷೇತ್ರಕ್ಕೆ ಬಿಎಸ್ವೈ ಪುತ್ರ ವಿಜಯೇಂದ್ರ ಆಗಮಿಸುತ್ತಿರೋ ವಿಚಾರವಾಗಿ ಮಾತನಾಡಿದ ಅವರು, ವಿಜಯೇಂದ್ರ ಬರೋದಕ್ಕೂ, ಹೋಗೋದಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಪಕ್ಷದ ಕಾರ್ಯಕ್ರಮಕ್ಕೆ ಬಂದು ಹೋಗುತ್ತಾರೆ. ಇದು ಹುನಗುಂದ ಮತಕ್ಷೇತ್ರ, ಶಿಕಾರಿಪುರ ಅಲ್ಲ. ತಾಕತ್ತಿದ್ದರೆ ಇಲ್ಲಿ ಬಂದು ನಿಂತು ತೋರಿಸಲಿ. ನಾನೇನು ಅನ್ನೋದನ್ನ ವಿಜಯೇಂದ್ರಗೆ ತೋರಿಸುತ್ತೇನೆ ಎಂದರು. ಅಲ್ಲದೇ, ನನ್ನನೇ ಬಾ ಅಂದರೂ ಶಿಕಾರಿಪುರಕ್ಕೆ ಬಂದು ನಾನೇನು ಅನ್ನೋದನ್ನ ತೋರಿಸುತ್ತೇನೆ ಎಂದು ಓಪನ್ ಚಾಲೆಂಜ್ ಹಾಕಿದರು.
ಬಿಜೆಪಿಯವರದ್ದು ಬೂಟಾಟಿಕೆಯ ದೇಶಭಕ್ತಿ. ಸಿಟಿ ರವಿ ಕೆಂಪುಕೋಟೆ ಮೇಲೆ ಕೇಸರಿ ಧ್ಚಜ ಮಾಡುತ್ತೇವೆ ಎಂದು ಹೇಳುತ್ತಾರೆ. ಇದು ದೇಶ ಭಕ್ತಿನಾ?, ಶಿಕ್ಷಣ ಸಚಿವರು ಸೇರಿದಂತೆ ಬಿಜೆಪಿಯವರು ರಾಷ್ಟ್ರಧ್ವಜ ಜೊತೆಗೆ ಕೇಸರಿ ಧ್ವಜವನ್ನು ಹಿಡಿಯುತ್ತಾರೆ. ಬಿಜೆಪಿ ಪಕ್ಷದವರಿಗೆ ನಾಚಿಕೆ ಮಾನಮರ್ಯಾದೆ ಇಲ್ವಾ ಎಂದು ಕಿಡಿಕಾರಿದರು.
ಇದನ್ನೂ ಓದಿ :ಸಚಿವ ಮಾಧುಸ್ವಾಮಿ ತಾವೊಬ್ಬರೇ ಮೇಧಾವಿ ಅಂದುಕೊಂಡಿದ್ದಾರೆ: ಎಸ್ ಟಿ ಸೋಮಶೇಖರ್