ಬಾಗಲಕೋಟೆ: ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ್ ಅವರು ನಗರದ ಮುಚಖಂಡಿ ಕೆರೆಯನ್ನು ವೀಕ್ಷಣೆ ಮಾಡುವ ಜೊತೆಗೆ ಕೆಲ ಸಮಯ ಬೆಟ್ಟದ ಮೇಲೆ ಕುಳಿತು ಪ್ರಕೃತಿಯ ಸೌಂದರ್ಯ ಸವಿದರು.
ಮುಚಖಂಡಿ ಕೆರೆ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ - news kannada
ಐತಿಹಾಸಿಕ ಹಿನ್ನೆಲೆ ಹೊಂದಿರುವ ಮುಚಖಂಡಿ ಕೆರೆಯ ವೀಕ್ಷಣೆಗೆಂದು ಆಗಮಿಸಿದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹಾಗೂ ಇತರೆ ಸಿಬ್ಬಂದಿ ವೀಕ್ಷಣೆ ಮಾಡುತ್ತಾ ಕೆಲ ಹೊತ್ತು ಇಲ್ಲಿನ ಸೌಂದರ್ಯ ಸವಿದರು.
![ಮುಚಖಂಡಿ ಕೆರೆ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ](https://etvbharatimages.akamaized.net/etvbharat/prod-images/768-512-3948152-800-3948152-1564086227466.jpg)
ಮುಚಖಂಡಿ ಕೆರೆ ವೀಕ್ಷಣೆಯಲ್ಲಿ ತೊಡಗಿರುವ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ್
ಐತಿಹಾಸಿಕ ಹಿನ್ನೆಲೆ ಹೊಂದಿರುವ ಮುಚಖಂಡಿ ಕೆರೆಗೆ ಆಲಮಟ್ಟಿ ಹಿನ್ನೀರಿನಿಂದ ನೀರು ತುಂಬಿಸುವ ಯೋಜನೆ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೀರು ಮುಚಖಂಡಿ ಕೆರೆಗೆ ಬರುತ್ತಿದ್ದು, ಅದರ ವೀಕ್ಷಣೆ ಮಾಡಿದರು. ಕರೆಯಲ್ಲಿ ಬೋಟ್ ಅಳವಡಿಸಿ ಸ್ಥಳೀಯರಿಗೆ ಆಕರ್ಷಣೆ ಆಗುವಂತೆ ಮಾಡುವ ಬಗ್ಗೆ ಹಿಂದಿನ ಸರ್ಕಾರದಲ್ಲಿ ಚಾಲನೆ ನೀಡಲಾಗಿತ್ತು.ಹಾಗಾಗಿ ವೀಕ್ಷಣೆ ಜೊತೆ ಜೊತೆಗೆ ಅದರ ಬಗ್ಗೆ ಚರ್ಚೆ ಸಹ ನಡೆಸಿದರು. ಇದೇ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿ ಶ್ರೀಶೈಲ ಕಂಕಣವಾಡಿ ಹಾಗೂ ನಿರ್ಮಿತ ಕೇಂದ್ರದ ಅಧಿಕಾರಿ ಶಂಕರ ಗೂಗಿ ಸೇರಿದಂತೆ ಇತರ ಸಿಬ್ಬಂದಿ ಉಪಸ್ಥಿತರಿದ್ದರು.