ಬಾಗಲಕೋಟೆ:ಸುಳ್ಳ ಗ್ರಾಮದ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿಗಳನ್ನಈಗಾಗಲೇವಿತರಣೆ ಮಾಡಲಾಗಿದೆ, ಮಲಪ್ರಭಾ ನದಿ ಪ್ರವಾಹ ಸಂತ್ರಸ್ತರಿಗೆ ವಿತರಣೆ ಮಾಡಲು ಪರಿಹಾರ ಸಾಮಾಗ್ರಿ ತೆಗೆದುಕೊಂಡು ಹೋಗುವ ವೇಳೆ ಈ ಘಟನೆ ನಡೆದಿದೆ.
ಮುಗಿಯದ ಪ್ರವಾಹ ಸಂತ್ರಸ್ತರ ಗೋಳು...ಪರಿಹಾರ ಸಾಮಗ್ರಿಗಾಗಿ ವಾಗ್ವಾದ - flood victims
ಮಲಪ್ರಭಾ ನದಿ ಪ್ರವಾಹ ಸಂತ್ರಸ್ತರಿಗಾಗಿ ಪರಿಹಾರ ಸಾಮಾಗ್ರಿ ವಿತರಿಸಲು ಬಂದಿದ್ದ ಲಾರಿಯನ್ನ ತಡೆದ ಬಾದಾಮಿ ತಾಲೂಕಿನ ಸುಳ್ಳ ಗ್ರಾಮದ ಸಂತ್ರಸ್ತರು , ಅದರಲ್ಲಿದ್ದ ಅಕ್ಕಿ ಚೀಲ ಸೇರಿದಂತೆ ಹಲವಾರು ಸಾಮಾಗ್ರಿಗಳನ್ನ ಹೊತ್ತುಕೊಂಡ ಹೋದ ಘಟನೆ ನಡೆದಿದೆ.
ಮುಗಿಯದ ಸಂತ್ರಸ್ತರ ಬಯಕೆ...ಪರಿಹಾರ ಸಾಮಗ್ರಿಗಾಗಿ ವಾಗ್ವಾದ
ಈ ವೇಳೆ ಅಕ್ಕಿ ವಿತರಣೆ ಮಾಡಲು ಬಂದ ಸಿಬ್ಬಂದಿ ಇದು ಬೇರೆ ಸಂತ್ರಸ್ತರಿಗೆ ನೀಡಲು ತಂದಿರುವುದು ಎಂದರೂ ಕೇಳದೇ, ಅವರೊಂದಿಗೆ ವಾಗ್ವಾದ ನಡೆಸಿ ಸಾಮಾಗ್ರಿಗಳನ್ನ ಹೊತ್ತುಕೊಂಡು ಹೋಗಿದ್ದಾರೆ.