ಬಾಗಲಕೋಟೆ :ಕೊರೊನಾ ಭೀತಿ ಹಿನ್ನೆಲೆ ಮಾರುಕಟ್ಟೆಯಲ್ಲಿ ಮೊದಲಿನಂತೆ ವ್ಯಾಪಾರ, ವಹಿವಾಟು ಇಲ್ಲದೆ ವ್ಯಾಪಾರಸ್ಥರು ಕಂಗಲಾಗಿದ್ದಾರೆ. ಕೆಲ ತರಕಾರಿಗಳ ಬೆಲೆಯೂ ಸಹ ಏರಿಕೆ ಆಗಿರುವುದರಿಂದ ಗ್ರಾಹಕರ ಜೇಬಿಗೂ ಕತ್ತರಿ ಬಿದ್ದಿದೆ. ಈರುಳ್ಳಿ ಕೆಜಿಗೆ 20 ರಿಂದ 30 ರೂ. ಏರಿಕೆ ಆಗಿದ್ರೆ, ಹಾಗಲಕಾಯಿ,ಹಿರೇಕಾಯಿ ಕೆಜಿಗೆ 50 ರಿಂದ 60 ರೂಪಾಯಿಗೆ ಏರಿಕೆ ಕಂಡಿದೆ. ಇನ್ನೂ ಟೊಮ್ಯಾಟೊ ಬೆಲೆ ಕೆಜಿಗೆ 10 ರಿಂದ 20 ರೂಪಾಯಿಗೆ ಏರಿಕೆಯಾಗಿದೆ.
ಗಗನಕ್ಕೇರಿದ ತರಕಾರಿ ಬೆಲೆ.. ವ್ಯಾಪಾರಸ್ಥರಿಗೆ ನಷ್ಟ, ಗ್ರಾಹಕರಿಗೆ ಸಂಕಷ್ಟ!
ಹೀಗೆ ಒಂದೆಡೆ ತರಕಾರಿ ಮಾರುಕಟ್ಟೆಯಲ್ಲಿ ದರಗಳು ಏರಿಕೆ ಆಗಿದ್ರೆ, ಇನ್ನೊಂದೆಡೆ ಕೊರೊನಾ ಭೀತಿಯಿಂದ ಜನ ಮೊದಲಿನಂತೆ ವ್ಯಾಪಾರ, ವಹಿವಾಟು ಆಗುತ್ತಿಲ್ಲ. ಇದರಿಂದ ಜೀವನಕ್ಕೆ ತೊಂದರೆ ಆಗುತ್ತಿದೆ..
ಹೀಗೆ ಒಂದೆಡೆ ತರಕಾರಿ ಮಾರುಕಟ್ಟೆಯಲ್ಲಿ ದರಗಳು ಏರಿಕೆ ಆಗಿದ್ರೆ, ಇನ್ನೊಂದೆಡೆ ಕೊರೊನಾ ಭೀತಿಯಿಂದ ಜನ ಮೊದಲಿನಂತೆ ವ್ಯಾಪಾರ, ವಹಿವಾಟು ಆಗುತ್ತಿಲ್ಲ. ಇದರಿಂದ ಜೀವನಕ್ಕೆ ತೊಂದರೆ ಆಗುತ್ತಿದೆ ಎಂದು ತರಕಾರಿ ಮಾರಾಟ ಮಾಡುವವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆ ಆಹಾರ ಧಾನ್ಯಗಳು ಮೊದಲಿನಷ್ಟು ಬೇರೆ ಪ್ರದೇಶದಿಂದ ಬರುತ್ತಿಲ್ಲ. ಕಾರ್ಮಿಕರು ಇಲ್ಲದೆ ಕಾರ್ಖಾನೆಯಿಂದ ಸರಕು ಸಾಗಾಣಿಕೆ ಹೆಚ್ಚು ಪ್ರಮಾಣದಲ್ಲಿ ಆಗದೆ ಇರುವುದು ಸಮಸ್ಯೆಗಳಿಗೆ ಕಾರಣವಾಗಿದೆ. ಇದರಿಂದಾಗಿ ದಿನಗೂಲಿಗರು, ತರಕಾರಿ ಮಾರಾಟಗಾರರು ಸೇರಿ ಸಣ್ಣಪುಟ್ಟ ವ್ಯಾಪಾರಸ್ಥರು ಪರದಾಡುವಂತಾಗಿದೆ.