ಕರ್ನಾಟಕ

karnataka

ETV Bharat / state

ವೈಯಕ್ತಿಕ ವಿಚಾರ ಮೊನ್ನೆ ಮೀಡಿಯಾದಲ್ಲಿ ತೋರಿಸಿದ್ದೀರಿ: ವೀಣಾ ಕಾಶಪ್ಪನವರ್​

ಬಿಜೆಪಿ ಪಕ್ಷದ ಹೈಕಮಾಂಡ್​ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಅರವಿಂದ ಲಿಂಬಾವಳಿ ಅವರ ರಾಜೀನಾಮೆ ಪಡೆಯದೆ ಇದ್ದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ವತಿಯಿಂದ ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಕೆಪಿಸಿಸಿ ಮಹಿಳಾ ಘಟಕ ಉಪಾಧ್ಯಕ್ಷರಾದ ವೀಣಾ ಕಾಶಪ್ಪನವರ್​ ಎಚ್ಚರಿಸಿದ್ದಾರೆ.

ಕೆಪಿಸಿಸಿ ಮಹಿಳಾ ಘಟಕ ಉಪಾಧ್ಯಕ್ಷರಾದ ವೀಣಾ ಕಾಶಪ್ಪನವರ್
ಕೆಪಿಸಿಸಿ ಮಹಿಳಾ ಘಟಕ ಉಪಾಧ್ಯಕ್ಷರಾದ ವೀಣಾ ಕಾಶಪ್ಪನವರ್

By

Published : Sep 4, 2022, 5:35 PM IST

ಬಾಗಲಕೋಟೆ: ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ಅವರು ಎರಡನೇಯ ಮದುವೆ ವಿಚಾರವಾಗಿ ಅವರ ಪತ್ನಿ ವೀಣಾ ಕಾಶಪ್ಪನವರ್​ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ವೈಯಕ್ತಿಕ ವಿಚಾರ ಮೊನ್ನೆ ಮಿಡಿಯಾದಲ್ಲಿ ತೋರಿಸಿದ್ದೀರಿ. ಅದರ ಬಗ್ಗೆ ನಾನು ವಿಚಾರ ಮಾಡುತ್ತಿದ್ದೇನೆ. ಸಮಗ್ರ ಮಾಹಿತಿ ಪಡೆದುಕೊಂಡು ಅದರ ಬಗ್ಗೆ ಪ್ರತ್ಯೇಕ ಪತ್ರಿಕಾಗೋಷ್ಠಿಯನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ನವನಗರದ ಪತ್ರಿಕಾ ಭವನದಲ್ಲಿ ಮಾಧ್ಯಮದವರೊಂದಿಗೆ ಈ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ವೀಣಾ ಕಾಶಪ್ಪನವರ್​, ನನಗೆ ಮಾಧ್ಯಮಗಳಲ್ಲಿ ತೋರಿಸಿದಾಗಲೇ ವೈಯಕ್ತಿಕ ಜೀವನದ ಬಗ್ಗೆ ವಿಚಾರ ಗೊತ್ತಾಗಿದ್ದು. ಆಗಲೂ ಅವರನ್ನೇ ಕೇಳಿ ಅಂತ ಹೇಳಿದ್ದೆ. ಈಗಲೂ ಅವರನ್ನೇ ಕೇಳಿ ಅಂತ ಹೇಳುತ್ತೇನೆ ಎಂದರು. ಎರಡನೇಯ ಪತ್ನಿಯ ಹೆಸರು ಹಾಗೂ ಮಗುವಿನ ಸರ್ಟಿಫಿಕೇಟ್ ತೋರಿಸಿದ್ದಾರೆ. ಅಂದ್ರೆ ಸುಳ್ಳು ತೋರಿಸಿದ್ದಾರೋ ನಿಜ ತೋರಿಸಿದ್ದಾರೋ ಅನ್ನೋದು ಮಾಧ್ಯಮದವರಿಗೆ ಗೊತ್ತಿರುತ್ತೆ ಎಂದು ಹೇಳಿದರು.

ಕೆಪಿಸಿಸಿ ಮಹಿಳಾ ಘಟಕ ಉಪಾಧ್ಯಕ್ಷರಾದ ವೀಣಾ ಕಾಶಪ್ಪನವರ್ ಅವರು ಮಾತನಾಡಿರುವುದು

ಸರ್ಕಾರಿ ದಾಖಲೆಗಳು ಸುಳ್ಳಾಗಲು ಸಾಧ್ಯವಿಲ್ಲ. ಈ ವಿಚಾರವಾಗಿ ಅವರನ್ನು ಕೇಳಬೇಕು ನೀವು. ಸದ್ಯ ನಾನು ಮಾಹಿತಿ ಕಲೆಹಾಕುತ್ತಿದ್ದೇನೆ. ನನಗೆ ಇನ್ನೂ ಸಮಯ ಬೇಕು. ಮಾಹಿತಿ ಪಡೆದು ಮತ್ತೆ ಮಾಧ್ಯಮಗೋಷ್ಟಿ ಮಾಡುತ್ತೇನೆ. ತಪ್ಪು ಅಂತ ಮಾಧ್ಯಮದವರು ತೋರಿಸಿದ್ದೀರಿ. ಅದು ಸುಳ್ಳು ಮಾಹಿತಿ ಅಲ್ಲ ಅಂತ ಹೇಳಿದ್ದೀರಿ. ಹೀಗಾಗಿ, ಮಾಧ್ಯಮಕ್ಕೆ ಗೌರವಿಸುತ್ತೇನೆ ಎಂದು ಹೇಳಿದರು.

ಲಿಂಬಾವಳಿ‌ ವಿರುದ್ಧ ವಾಗ್ದಾಳಿ:ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮಹಿಳೆಯರ ಬಗ್ಗೆ ನಿಂದನೆ ಮಾಡಿರುವುದು ಖಂಡಿಸಿ, ಇಂತಹ ಶಾಸಕರ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು. ಇದು ಅಧಿಕಾರದ ದರ್ಪ ಹಾಗೂ ಬಿಜೆಪಿ ನಾಯಕರ ನಡವಳಿಕೆ ಬಗ್ಗೆ ತೋರಿಸುತ್ತದೆ. ಸಾರ್ವಜನಿಕ ರಂಗದಲ್ಲಿರುವವರೂ ಜನಪ್ರತಿನಿಧಿಗಳಲ್ಲದವರೂ ಮಹಿಳೆಯರಿಗೆ ಗೌರವ ಕೊಡಬೇಕು. ನಿಮಗೂ ಮನೆಯಲ್ಲಿ ತಾಯಿ, ಪತ್ನಿ ಹಾಗೂ ಮಗಳು ಇರುತ್ತಾರೆ. ಇದೇ ರೀತಿಯಾಗಿ ಮಾಡುತ್ತೀರಾ ಎಂದು ಲಿಂಬಾವಳಿ‌ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಮಹಿಳಾ ಘಟಕ ಉಪಾಧ್ಯಕ್ಷರಾದ ವೀಣಾ ಕಾಶಪ್ಪನವರ್ ಅವರು ಮಾತನಾಡಿರುವುದು

ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ: ಬಿಜೆಪಿ ಪಕ್ಷದ ಹೈಕಮಾಂಡ್​ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಅರವಿಂದ ಲಿಂಬಾವಳಿ ಅವರ ರಾಜೀನಾಮೆ ಪಡೆಯದೆ ಇದ್ದಲ್ಲಿ, ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ವತಿಯಿಂದ ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯಾಗಿ 25 ವರ್ಷ ಕಳೆದರೂ ಅಭಿವೃದ್ಧಿ ಆಗಿಲ್ಲ. ಸಂಸದರಾದ ಪಿ ಸಿ ಗದ್ದಿಗೌಡರ್​ ಅವರು ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಿಲ್ಲ. ಡಬಲ್​ ಇಂಜಿನ್ ಸರ್ಕಾರ ಇದ್ದರೂ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಆರೋಪಿಸಿದರು.

ಹೈಕಮಾಂಡ್​ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧ: ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಟಿಕೆಟ್​ ಆಕಾಂಕ್ಷಿ ಅಭ್ಯರ್ಥಿ ಬಗ್ಗೆ ಪ್ರತಿಕ್ರಿಯೆ ನೀಡಿದ ವೀಣಾ ಅವರು, ಯಾವ ಕ್ಷೇತ್ರದಿಂದಲೂ ವಿಧಾನಸಭೆಗೆ ಸ್ಪರ್ಧೆ ಮಾಡಲ್ಲ. ಆಕಾಂಕ್ಷಿಯೂ ಅಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್​ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧ. ಪಕ್ಷದ ಸಂಘಟನೆಗೆ ಒತ್ತು‌ ನೀಡುತ್ತಿದ್ದೇವೆ ಎಂದರು.

ಓದಿ:2ನೇ ಮದುವೆ ವಿಚಾರ ದಾಖಲೆ ಕೊಟ್ಟರೆ ಮಾತನಾಡುತ್ತೇನೆ: ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್

ABOUT THE AUTHOR

...view details