ಬಾಗಲಕೋಟೆ: ಉತ್ತರಾಖಂಡದ ಪ್ರವಾಸೋದ್ಯಮ ಸಚಿವರಾದ ಅಮೃತಾ ರಾವತ್ ಅವರು ಜಿಲ್ಲೆಯ ಐತಿಹಾಸಿಕ ಸ್ಥಳಗಳಾದ ಐಹೊಳೆ, ಪಟ್ಟದಕಲ್ಲು ಹಾಗೂ ಮಹಾಕೂಟ ಕ್ಷೇತ್ರಗಳಿಗೆ ಭೇಟಿ ನೀಡಿ ವೀಕ್ಷಿಸಿದರು.
ಐಹೊಳೆಗೆ ಉತ್ತರಾಖಂಡದ ಪ್ರವಾಸೋದ್ಯಮ ಸಚಿವರ ಭೇಟಿ - ಉತ್ತರಾಖಂಡದ ಪ್ರವಾಸೋದ್ಯಮ ಸಚಿವ
ಉತ್ತರಾಖಂಡದ ಪ್ರವಾಸೋದ್ಯಮ ಸಚಿವರಾದ ಅಮೃತಾ ರಾವತ್ ಅವರು, ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಸ್ಮಾರಕಗಳು,ಶಿಲ್ಪಕಲೆಗಳನ್ನು ನೋಡಿ ಉಲ್ಲಾಸ ಭರಿತರಾದರು.
![ಐಹೊಳೆಗೆ ಉತ್ತರಾಖಂಡದ ಪ್ರವಾಸೋದ್ಯಮ ಸಚಿವರ ಭೇಟಿ ಪ್ರವಾಸೋದ್ಯಮ ಸಚಿವರ ಭೇಟಿ](https://etvbharatimages.akamaized.net/etvbharat/prod-images/768-512-6077414-thumbnail-3x2-nin.jpg)
ಪ್ರವಾಸೋದ್ಯಮ ಸಚಿವರ ಭೇಟಿ
ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿ, ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಸ್ಮಾರಕಗಳು,ಶಿಲ್ಪಕಲೆಗಳನ್ನು ನೋಡಿ ಉಲ್ಲಾಸ ಭರಿತರಾದರು.ಆದರೆ.ಐಹೊಳೆ ಹಾಗೂ ಪಟ್ಟದಕಲ್ಲು ಗ್ರಾಮದ ಒಳಗೆ ಸರಿಯಾದ ರಸ್ತೆ ಇಲ್ಲದೆ ಹಾಗೂ ಉದ್ಯೋಗಕ್ಕೆ ಉತ್ತೇಜನ ದೂರಕದ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಮಹೆಬೂಬಿ, ಪ್ರವಾಸೋದ್ಯಮ ಇಲಾಖೆಯ ಸಂಯೋಜಕ ಅನೀಲಕುಮಾರ ಇದ್ದರು.