ಕರ್ನಾಟಕ

karnataka

ETV Bharat / state

ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿ ಪಾದಯಾತ್ರೆ - ಎಸ್.ಆರ್ ಪಾಟೀಲ

ಕೃಷ್ಣ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿ ನನೆಗುದಿಗೆ ಬಿದ್ದು ದಶಕವೇ ಗತಿಸಿದೆ. ಈ ಹಿನ್ನೆಲೆ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಪಾದಯಾತ್ರೆ ಹಮ್ಮಿಕೊಂಡಿದೆ.

bagalkot
ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಹಮ್ಮಿಕೊಂಡ ಪಾದಯಾತ್ರೆ

By

Published : Oct 2, 2021, 12:47 PM IST

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇಯ ಹಂತದ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ವತಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಬೀಳಗಿ ತಾಲೂಕಿನ ಅಂಗವಾಡಿಯಿಂದ ವಿಜಯಪುರ ಜಿಲ್ಲೆಯ ಕೊಲ್ಹಾರ ಸೇತುವೆ ವರೆಗೆ ಸುಮಾರು 24 ಕೀ.ಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ವಿಧಾನ ಪರಿಷತ್​ ಸದಸ್ಯರಾದ ಎಸ್. ಆರ್ ಪಾಟೀಲ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದ್ದು, ಗದಗದ ತೋಂಟದಾರ್ಯ ಸ್ವಾಮೀಜಿ, ಇಲಕಲ್ಲ ಮಹಾಂತ ಗುರು ಸ್ವಾಮೀಜಿ ಸೇರಿದಂತೆ ಪ್ರಮುಖ ಮಠಾಧೀಶರು ಪಾದಯಾತ್ರೆಗೆ ಚಾಲನೆ ನೀಡಿದರು. ಈ ಕುರಿತು ನಮ್ಮ ಪ್ರತಿನಿಧಿ ಎಸ್.ಆರ್ ಪಾಟೀಲರೊಂದಿಗೆ ನಡೆಸಿದ ಚಿಟ್​ಚಾಟ್​ ಇಲ್ಲಿದೆ ನೋಡಿ.

ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಹಮ್ಮಿಕೊಂಡ ಪಾದಯಾತ್ರೆ

ABOUT THE AUTHOR

...view details