ಬಾಗಲಕೋಟೆ:ನಗರದಲ್ಲಿ ನಿನ್ನೆ ನಡೆದ ಘಟನೆಯಿಂದ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಯಾವುದೇ ಕುಂದು ಉಂಟಾಗೋದಿಲ್ಲ. ಸದನದ ಒಳಗೆ ಮತ್ತು ಹೊರಗೆ ಈ ರೀತಿಯಲ್ಲಿ ಯಾರಿಗಾದರೂ ತೊಂದರೆಯಾದಲ್ಲಿ ಅಥವಾ ಶೋಷಣೆಯಾದಲ್ಲಿ ಕಾಂಗ್ರೆಸ್ ಪಕ್ಷದಿಂದ ಮೊದಲು ಧ್ವನಿ ಎತ್ತುವವರೇ ಸಿದ್ದರಾಮಯ್ಯನವರು ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಆಗಿದ್ದ ದುರ್ನಾತದ ಬಗ್ಗೆ ದಾಖಲೆ ನೀಡಬಲ್ಲೆ: ಆರಗ ಜ್ಞಾನೇಂದ್ರ
ನಗರಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ನ್ಯಾಯ ಕೊಡಿಸಿ ಅಂತ ಕೇಳಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯೂ ಅಲ್ಲ. ನಮ್ಮಿಂದ ಹೋರಾಟ ಮಾತ್ರ ಸಾಧ್ಯ. ಸಿದ್ದರಾಮಯ್ಯನವರು ನೊಂದವರ ಬಗ್ಗೆ ಅನುಕಂಪ ತೋರಿಸಿ ವೈಯಕ್ತಿಕ ಸಹಾಯ ಮಾಡಲು ಮುಂದಾಗಿದ್ದರು. ಆ ಮಹಿಳೆ ಮೊದಲು ಬೇಡ ಎಂದು ನಿರಾಕರಿಸಿ ನಂತರ ಮನಬದಲಿಸಿ ಹಣ ಸ್ವೀಕರಿಸಿದ್ದಾರೆ. ಆ ಮಹಿಳೆ ಕೋಮುವಾದಿಗಳ ಪ್ರೇರಣೆಯಿಂದಾಗಿ ಮತ್ತು ಬೇರೆಯವರ ಕುಮ್ಮಕ್ಕಿನಿಂದ ಈ ರೀತಿ ಮಾಡಿದ್ದಾರೆ. ಹೀಗೆ ಮಾಡೋದ್ರಿಂದ ಕೋಮುವಾದಿಗಳಿಗೆ ಮತ್ತಷ್ಟು ಪ್ರೇರಣೆ ನೀಡಿದಂತಾಗುತ್ತೆ ಎಂದು ಪರೋಕ್ಷವಗಾಗಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.