ಬಾಗಲಕೋಟೆ:ತಮಿಳುನಾಡಿನ ಮಧುರೈನಿಂದ ಬಾಗಲಕೋಟೆಯ ಇಳಕಲ್ ಪಟ್ಟಣಕ್ಕೆ ಬಂದ ಲಾರಿಯೊಂದರಲ್ಲಿ ಮಹಿಳೆಯ ರುಂಡ ಪತ್ತೆಯಾಗಿದೆ.
ತಮಿಳುನಾಡಿನ ಮಧುರೈನಿಂದ ಇಳಕಲ್ ಪಟ್ಟಣಕ್ಕೆ ಬಂದ TN52 R7952 ಸಂಖ್ಯೆಯ ಲಾರಿಯಲ್ಲಿ ರುಂಡ ಪತ್ತೆಯಾಗಿದೆ. ಚಾಲಕ ಲಾರಿಯಲ್ಲಿದ್ದ ಗ್ರಾನೈಟ್ ಇಳಿಸುವಾಗ ಚೀಲವೊಂದರಲ್ಲಿ ಅಂದಾಜು 65 ರಿಂದ 70 ವರ್ಷದ ಅಪರಿಚಿತ ಮಹಿಳೆಯ ರುಂಡ ಕಂಡು ಬಂದಿದೆ.