ಬಾಗಲಕೋಟೆ:ಡಿ.ಕೆ.ಶಿವಕುಮಾರ್ ಅವರ ಕಾಲದ ಕಮಿಷನ್ ದಂಧೆ ಅವರಿಗೆ ಈಗ ನೆನಪಾಗಿರಬಹುದು. ಅದಕ್ಕೆ ಈಗ ವಿನಾ ಕಾರಣ ಬಿಜೆಪಿ ಪಕ್ಷದ ಮೇಲೆ ಹೇಳುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ತಿರುಗೇಟು ನೀಡಿದ್ದಾರೆ.
ಅವರ ಕಾಲದ ಕಮಿಷನ್ ದಂಧೆ ಅವರಿಗೆ ಈಗ ನೆನಪಾಗಿರಬಹುದು: ಡಿಕೆಶಿಗೆ ಕತ್ತಿ ಟಾಂಗ್ - ಡಿ ಕೆ ಶಿವಕುಮಾರ್ ವಿರುದ್ಧ ಕತ್ತಿ ವಾಗ್ದಾಳಿ
ಕಮಿಷನ್ ತೆಗೆದುಕೊಳ್ಳುವಂತಹ ಮಂತ್ರಿಗಳ್ಯಾರು ನಮ್ಮಲ್ಲಿಲ್ಲ. ಡಿ.ಕೆ.ಶಿವಕುಮಾರ್ ಅವರ ಕಾಲದ ಕಮಿಷನ್ ದಂಧೆ ಅವರಿಗೆ ಈಗ ನೆನಪಾಗಿರಬಹುದು ಎಂದು ಸಚಿವ ಉಮೇಶ್ ಕತ್ತಿ ಟಾಂಗ್ ನೀಡಿದ್ದಾರೆ.
ಬಾಗಲಕೋಟೆ ನವನಗರದ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಮಿಷನ್ ತೆಗೆದುಕೊಳ್ಳುವ ಮಂತ್ರಿಗಳ್ಯಾರು ನಮ್ಮಲ್ಲಿಲ್ಲ. ಅಂತಹದ್ದೇನಾದ್ರೂ ಇದ್ದರೆ ಸಾಬೀತುಪಡಿಸಲಿ, ಕೋರ್ಟ್ಗೆ ಹೋಗಲಿ, ಬೇಕಿದ್ದರೆ ಪೊಲೀಸರಿಗೆ ದೂರು ಕೊಡಲಿ ಎಂದ್ರು. ಸಾಕಷ್ಟು ಕಾನೂನುಗಳಿವೆ, ಕ್ರಮ ತೆಗೆದುಕೊಳ್ಳಲಿ. ಬರೀ ಬಾಯಿ ಮಾತಲ್ಲೇ ಹೇಳೋದು ಸರಿಯಲ್ಲ. ತಾವೊಬ್ಬ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಖಚಿತ ಮಾಹಿತಿಯೊಂದಿಗೆ ಮಾತನಾಡೋದು ಒಳ್ಳೆಯದು ಎಂದು ಹೇಳಿದ್ರು. ಈ ಹಿಂದೆ ಡಿಕೆಶಿ ಮಂತ್ರಿಯಾಗಿದ್ದವರು. ಅವರು ಕಮಿಷನ್ ತಗೊಂಡಿದ್ದಾರೆ ಅನ್ನೋದಕ್ಕೆ ಸಿಬಿಐ, ಇಡಿ ತನಿಖೆ ಆಗಿದೆ. ಅದೇ ರೀತಿ ಬೇರೆಯವರಿಗೂ ಆಗುತ್ತೆ. ಅವರ ಬಳಿ ಮಾಹಿತಿ ಇದ್ದರೆ ಕೊಡಲಿ ಎಂದು ಸಚಿವ ಕತ್ತಿ ಸವಾಲ್ ಹಾಕಿದರು.
ಜಿಲ್ಲೆಯಲ್ಲಿ ಲಾಕ್ಡೌನ್ ವಿಚಾರವಾಗಿ ಮಾತನಾಡಿ, ಪ್ರಧಾನಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಎಲ್ಲಾ ಅಧಿಕಾರ ಕೊಟ್ಟಿದ್ದಾರೆ. ನಾವು, ಅವರು ಸೇರಿಯೇ ಕೊರೊನಾ ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕಿದೆ. ರಾಜಕಾರಣಿಗಳು, ಡಿಸಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಸೇರಿ ಇವತ್ತು ಸೂಕ್ತ ಕ್ರಮ ಕೈಗೊಂಡು ಪ್ರಧಾನಿ ಅವರ ಮಾತಿನಂತೆ ಮುನ್ನಡೆಯುತ್ತೇವೆ ಎಂದರು. 3 ದಿನ ಲಾಕ್ಡೌನ್ ಮಾಡಬೇಕೆನ್ನುವ ವಿಚಾರ ಮಾಡಿದ್ದಾರೆ. ಸೋಮವಾರ, ಬುಧುವಾರ ಮತ್ತು ಶುಕ್ರವಾರ ಫುಲ್ ಲಾಕ್ಡೌನ್ ಘೋಷಣೆಯಾಗುತ್ತದೆ. ಜನ ಅರ್ಥ ಮಾಡಿಕೊಳ್ಳದೇ ಬರೀ ಸರ್ಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಜನರು ಸಹ ಕೈ ಜೋಡಿಸಬೇಕು ಎಂದು ಸಚಿವರು ಮನವಿ ಮಾಡಿಕೊಂಡರು.