ಬಾಗಲಕೋಟೆ: ಬನಹಟ್ಟಿ ತಾಲೂಕಿನ ರಬಕವಿಯ ವಿದ್ಯಾನಗರದಲ್ಲಿರುವ ಮಾಜಿ ಸಚಿವೆ ಶ್ರೀಮತಿ ಉಮಾಶ್ರೀ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಬಾಗಿಲು ಮುರಿದಿರುವ ಕಳ್ಳರು ಅಪಾರ ಪ್ರಮಾಣದ ವಸ್ತು ಮತ್ತು ಹಣ ದೋಚಿರಬಹುದು ಎಂದು ಶಂಕಿಸಲಾಗಿದೆ.
ಮಾಜಿ ಸಚಿವೆ ಉಮಾಶ್ರೀ ಮನೆಯಲ್ಲಿ ಕಳ್ಳತನ... ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು - umashri house robbery
ಬಾಗಲಕೋಟೆಯ ಬನಹಟ್ಟಿ ತಾಲೂಕಿನ ರಬಕವಿಯ ವಿದ್ಯಾನಗರದಲ್ಲಿರುವ ಮಾಜಿ ಸಚಿವೆ ಉಮಾಶ್ರೀ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಅಪಾರ ಪ್ರಮಾಣದ ಹಣ ದೋಚಿರುವ ಶಂಕೆ ವ್ಯಕ್ತವಾಗಿದೆ.
ಮಾಜಿ ಸಚಿವೆ ಉಮಾಶ್ರೀ ಮನೆಯಲ್ಲಿ ಕಳ್ಳತನ
ಉಮಾಶ್ರೀ ಅವರು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದು, ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಸಿಲಿಕಾನ್ ಸಿಟಿಯಿಂದ ಉಮಾಶ್ರೀ ಅವರು ಮರಳಿ ಬಂದು ಪರಿಶೀಲನೆ ನಡೆಸಿದ ನಂತರ, ಎಷ್ಟು ಹಣ,ಚಿನ್ನಾಭರಣ ಕಳ್ಳತನವಾಗಿದೆ ಎಂಬುದು ಸ್ಪಷ್ಟವಾಗಲಿದೆ.
ಈಗಾಗಲೇ ಸ್ಥಳಕ್ಕೆ ದೌಡಾಯಿಸಿರುವ ಸಿಪಿಐ ಕರುಣೇಸಿಗೌಡ ಮತ್ತು ಪಿಎಸ್ಐ ವಿಜಯಕುಮಾರ ಕಾಂಬಳೆ ಪರಿಶೀಲನೆ ನಡೆಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Nov 2, 2020, 12:56 PM IST