ಬಾಗಲಕೋಟೆ :ಓವರ್ ಟೇಕ್ ಮಾಡಲು ಹೋಗಿ ಟ್ಯ್ರಾಕ್ಟರ್ ಗಾಲಿಗೆ ಸಿಲುಕಿ ಬೈಕ್ನಲ್ಲಿ ಚಲಿಸುತ್ತಿದ್ದ ನಾಲ್ವರಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಸೇತುವೆ ಬಳಿ ನಡೆದಿದೆ.
ಹನಮಪ್ಪ ಲಕ್ಷ್ಮಪ್ಪ ನಾಯ್ಕರ(65), ರುದ್ರವ್ವ ಹನಮಪ್ಪ ನಾಯ್ಕರ್ (55) ಮೃತವ್ಯಕ್ತಿಗಳು. ಬೈಕ್ನಲ್ಲಿ ಹೋಗುತ್ತಿದ್ದ ನಾಲ್ವರು ಟ್ಯ್ರಾಕ್ಟರ್ನ್ನು ಓವರ್ ಟೇಕ್ ಮಾಡಿ ಹಿಂದಕ್ಕೆ ಹಾಕುವ ಸಮಯದಲ್ಲಿ ಎದುರಿನಿಂದ ಟಂ ಟಂ ವಾಹನ ಬಂದಿದೆ. ಪರಿಣಾಮ ಆಯಾ ತಪ್ಪಿ ಟ್ಯ್ರಾಕ್ಟರ್ ಗಾಲಿಗೆ ಸಿಲುಕಿ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.