ಬಾಗಲಕೋಟೆ: ಜಿಲ್ಲೆಯಲ್ಲಿ ಇಂದು ಇಬ್ಬರು ಕೋವಿಡ್ನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ.
ಬಾಗಲಕೋಟೆಯಲ್ಲಿಂದು 1 ವರ್ಷದ ಮಗು ಸೇರಿ ಇಬ್ಬರು ಸೋಂಕಿತರು ಗುಣಮುಖ! - Bagalkot
ಬಾಗಲಕೋಟೆಯಲ್ಲಿಂದು ಇಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ನವನಗರದ ಸೆಕ್ಟರ್ ನಂ.10ರಲ್ಲಿ 26 ವರ್ಷದ ಮಹಿಳೆ ಪಿ-5967 ಹಾಗೂ 1 ವರ್ಷದ ಹೆಣ್ಣು ಮಗು ಪಿ-5966 ಸೋಂಕಿನಿಂದ ಗುಣಮುಖರಾದವರು.
ನವನಗರದ ಸೆಕ್ಟರ್ ನಂ.10ರಲ್ಲಿ 26 ವರ್ಷದ ಮಹಿಳೆ ಪಿ-5967, 1 ವರ್ಷದ ಹೆಣ್ಣು ಮಗು ಪಿ-5966 ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿ ಡಾ.ಚಂದ್ರಕಾಂತ ಜವಳಿ ಪ್ರಮಾಣ ಪತ್ರ ವಿತರಣೆ ಮಾಡಿದರು. ಬಳಿಕ ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು. ಇನ್ನು 17 ಸಕ್ರಿಯವಾದ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.
ಈ ಮಧ್ಯೆ ಮಹಾರಾಷ್ಟ್ರ ಹಾಗೂ ದೆಹಲಿಯಿಂದ ಬಂದಿರುವ ವ್ಯಕ್ತಿಗಳು ಹೋಂ ಕ್ವಾರಂಟೈನ್ಲ್ಲಿರುವ ಬದಲು ಹೊರಗಡೆ ಸಂಚರಿಸಿ, ಗೆಳೆಯರೂಡನೆ ಸೇರಿ ಪಾರ್ಟಿ ಮಾಡಿರುವ ಬಗ್ಗೆ ವರದಿಯಾಗಿದೆ. ಇನ್ನೊಂದೆಡೆ ವ್ಯಕ್ತಿಯೋರ್ವ ಕ್ವಾರಂಟೈನ್ ಕೆಂದ್ರದಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಆ ವ್ಯಕ್ತಿಯ ವರದಿ ಇನ್ನೂ ಬರಬೇಕಾಗಿದ್ದು, ಜಿಲ್ಲಾಡಳಿತಕ್ಕೆ ತಲೆ ಬಿಸಿಯಾಗಿದೆ.