ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಇಬ್ಬರು ಬಾಲಕರು ನೀರುಪಾಲು

ಎರಡು ಪ್ರತೇಕ ಘಟನೆಗಳಲ್ಲಿ ನೀರಿನಲ್ಲಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಬಾಗಲಕೋಟೆಯ ಹುನಗುಂದ ತಾಲೂಕಿನ ಸೂಳಿಭಾವಿ ಗ್ರಾಮದಲ್ಲಿ ಹಾಗೂ ಕಲಾದಗಿ ಗ್ರಾಮದಲ್ಲಿ ಪ್ರತ್ಯೇಕ ಘಟನೆ ನಡೆದಿವೆ.

ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

By

Published : Oct 12, 2019, 9:15 PM IST

ಬಾಗಲಕೋಟೆ:ಎರಡು ಪ್ರತೇಕ ಘಟನೆಗಳಲ್ಲಿ ಇಬ್ಬರು ಬಾಲಕರು ನೀರಿನಲ್ಲಿ ಮುಳಗಿ ಸಾವಿಗೀಡಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

ಹುನಗುಂದ ತಾಲೂಕಿನ ಸೂಳಿಭಾವಿ ಗ್ರಾಮದ ಶಾಲೆಯ ಕಟ್ಟಡ ನಿರ್ಮಾಣ ಹಿನ್ನೆಲೆ ಶಾಲಾ ಆವರಣದಲ್ಲಿ ಬೃಹತ್ ಆಕಾರದ ತಗ್ಗು ನಿರ್ಮಾಣವಾಗಿತ್ತು. ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಇದರಲ್ಲಿ ನೀರು ಸಂಗ್ರಹವಾಗಿತ್ತು. ಶಾಲಾ ಆವರಣದಲ್ಲಿ ಅಷ್ಟೊಂದು ಆಳ ಇರವುದಿಲ್ಲ ಎಂದು ನೀರಿಗೆ ಇಳಿದಾಗ ಬಾಲಕ ಮೃತಪಟ್ಟಿದ್ದಾನೆ. 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಗಣೇಶ ನಡಕಟ್ಟಿ(8) ಮೃತಪಟ್ಟ ಬಾಲಕ ಎನ್ನಲಾಗಿದೆ.

ಶಾಲಾ ಆವರಣದಲ್ಲಿ ಇಷ್ಟೊಂದು ದೊಡ್ಡ ತಗ್ಗು ತೆಗೆದಿರುವ ಬಗ್ಗೆ ಸ್ಥಳೀಯರು, ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯ ವಹಿಸಿರುವ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪ್ರಭಾರಿ ತಹಶೀಲ್ದಾರ ಆನಂದ ಕೋಲಾರ, ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದ್ದಾರೆ.

ಇನ್ನು ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಬಳಿ ಇರುವ ಶೆಲ್ಲಿಕೇರಿ ಕ್ರಾಸ್ ಬಳಿ ಪಂಪ್​​ ಹೌಸ್​ ನೀರಿನಲ್ಲಿ ಈಜಾಡಲು ಹೋದ ಬಾಲಕನೋರ್ವ ಸಾವನ್ನಪ್ಪಿದ್ದಾನೆ. ಯಾಸೀನ್ ಮಕಾನದಾರ(13) ಈಜಲು ಹೋದ ಸಮಯದಲ್ಲಿ ನೀರುಪಾಲಾಗಿದ್ದಾನೆ. ಈಜುಗಾರರ ಸಹಾಯದಿಂದ ಪೊಲೀಸರು ಮೃತದೇಹಕ್ಕಾಗಿ ಶೋಧ ನಡೆಸಿದ್ದಾರೆ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details