ಬಾಗಲಕೋಟೆ: ಭಾರತ ಕಂಡ ಖ್ಯಾತ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಿಧನ ಹಿನ್ನೆಲೆಯಲ್ಲಿ ಜಮಖಂಡಿ ಶಿಕ್ಷಕ ಹಾಗೂ ಕಲಾವಿದ ಡಾ. ಸಂಗಮೇಶ್ ಬಗಲಿ ಅವರು ತಮ್ಮ ರಕ್ತದಿಂದ ಎಸ್ಪಿಬಿ ಅವರ ಭಾವಚಿತ್ರ ರಚಿಸಿ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ತನ್ನ ರಕ್ತದಿಂದಲೇ ಎಸ್ಪಿ ಬಾಲಸುಬ್ರಹ್ಮಣ್ಯಂ ಭಾವಚಿತ್ರ ರಚಿಸಿ ಶ್ರದ್ಧಾಂಜಲಿ ಸಲ್ಲಿಸಿದ ಚಿತ್ರಕಲಾ ಶಿಕ್ಷಕ - ಎಸ್ಪಿಬಿಗೆ ಕಲಾವಿದನ ಶ್ರದ್ದಾಂಜಲಿ
ಶಿಕ್ಷಕ, ಚಿತ್ರ ಕಲಾವಿದ ಡಾ ಸಂಗಮೇಶ್ ಬಗಲಿ ತನ್ನ ರಕ್ತದಿಂದಲೇ ಬಾಲ ಸುಬ್ರಹ್ಮಣ್ಯಂ ಅವರು ಕೋಟ್ಯಂತರ ಅಭಿಮಾನಿಗಳಿಗೆ ಕೈಮುಗಿದ ಭಾವಚಿತ್ರ ರಚಿಸಿ, ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಅಭಿಮಾನ ಮೆರೆದಿದ್ದಾರೆ.
![ತನ್ನ ರಕ್ತದಿಂದಲೇ ಎಸ್ಪಿ ಬಾಲಸುಬ್ರಹ್ಮಣ್ಯಂ ಭಾವಚಿತ್ರ ರಚಿಸಿ ಶ್ರದ್ಧಾಂಜಲಿ ಸಲ್ಲಿಸಿದ ಚಿತ್ರಕಲಾ ಶಿಕ್ಷಕ balasubrahmanyam through design a portrait with blood](https://etvbharatimages.akamaized.net/etvbharat/prod-images/768-512-8941207-thumbnail-3x2-spb.jpg)
ರಕ್ತದಿಂದ ಎಸ್ಪಿ ಬಾಲಸುಬ್ರಹ್ಮಣ್ಯಂ ಭಾವಚಿತ್ರ ರಚನೆ
ರಕ್ತದ ಮೂಲಕ ಗಾನ ಗಂಧರ್ವ ಬಾಲಸುಬ್ರಹ್ಮಣ್ಯಂ ಅವರ ಚಿತ್ರ ಬಿಡಿಸಿ, ಗಮನ ಸೆಳೆದಿರುವ ಸಂಗಮೇಶ್ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ.
ರಕ್ತದಿಂದ ಎಸ್ಪಿಬಿ ಭಾವಚಿತ್ರ ರಚಿಸಿ ಶ್ರದ್ಧಾಂಜಲಿ ಸಲ್ಲಿಸಿದ ಚಿತ್ರಕಲಾ ಶಿಕ್ಷಕ
ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಸಂಗಮೇಶ್ ಅವರು, ಕಳೆದ 50 ವರ್ಷಗಳಿಂದ ಬಾಲಸುಬ್ರಹ್ಮಣ್ಯಂ ಅವರು ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ಸಂಗೀತ ಲೋಕದ ದಂತಕಥೆಯಾಗಿದ್ದಾರೆ. ಎಸ್ಪಿಬಿ ಅವರ ನಿಧನದಿಂದ ಇಂದು ಸಂಗೀತ ಕ್ಷೇತ್ರ ಬಡವಾಗಿದೆ ಎಂದರು.