ಬಾಗಲಕೋಟೆ:ಜಿಲ್ಲೆಯಲ್ಲಿ ಒಟ್ಟು ಐದು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಅದರಲ್ಲಿ ಓರ್ವ ವೃದ್ಧ ಮೃತಪಟ್ಟಿರುವುದು ಜನರಲ್ಲಿ ಆತಂಕ ಮೂಡಿಸಿತ್ತು. ಈ ನಡುವೆ ಮತ್ತೊಂದು ಭೀತಿ ಶುರುವಾಗಿದೆ.
ಒಂದೇ ಬಸ್ನಲ್ಲಿ 50 ಕೊರೊನಾ ಶಂಕಿತರ ರವಾನೆ... ಬಾಗಲಕೋಟೆ ಜಿಲ್ಲಾಡಳಿತ ಎಡವಟ್ಟು!
ಮುಧೋಳದಲ್ಲಿ ಗುಜರಾತ್ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಮುಧೋಳದ ಮದರಸಾ ವ್ಯಾಪ್ತಿಯ ಐವತ್ತು ಜನರನ್ನ ಜಿಲ್ಲಾಡಳಿತ ಒಂದೇ ಬಸ್ನಲ್ಲಿ ಬಾಗಲಕೋಟೆಗೆ ಸ್ಥಳಾಂತರ ಮಾಡಿದ್ದು ಮತ್ತಷ್ಟು ಸೋಂಕು ಹರಡುವ ಭೀತಿ ಹೆಚ್ಚಿದೆ.
ಹೌದು, ಮುಧೋಳದಲ್ಲಿ ಗುಜರಾತ್ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಮುಧೋಳದ ಮದರಸಾ ವ್ಯಾಪ್ತಿಯ ಐವತ್ತು ಜನರನ್ನ ಜಿಲ್ಲಾಡಳಿತ ಒಂದೇ ಬಸ್ನಲ್ಲಿ ಬಾಗಲಕೋಟೆಗೆ ಸ್ಥಳಾಂತರ ಮಾಡಿತ್ತು. ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ಒಂದೇ ಬಸ್ನಲ್ಲಿ ಎಲ್ಲರನ್ನೂ ಕಳಿಸಿರುವುದು ಸೋಂಕು ಹೆಚ್ಚಾಗುವ ಭೀತಿ ಹೆಚ್ಚಿಸಿದೆ. ಇದರಿಂದ ಜಿಲ್ಲಾಡಳಿತ ಮತ್ತಷ್ಟು ಎಡವಟ್ಟು ಮಾಡಿಕೊಂಡಿದೆ.
ಸುಮಾರು 50 ಜನರನ್ನ ಮುಧೋಳ ನಗರದಿಂದ ಒಂದೇ ಬಸ್ನಲ್ಲಿ ಸಾಮಾಜಿಕ ಅಂತರ ಕಾಪಾಡದೆ ಬಾಗಲಕೋಟೆಗೆ ಸ್ಥಳಾಂತರ ಮಾಡಲಾಗಿದೆ. ಸದ್ಯ ಅವರನ್ನ ಬಾಗಲಕೋಟೆ ಸಮೀಪದ ವಸತಿ ನಿಲಯದಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.